Job Description: * ಪ್ರಧಾನಿ ನರೇಂದ್ರ ಮೋದಿ ಅವರು ಆಸಿಯಾನ್ ಕೂಟ ರಾಷ್ಟ್ರಗಳ ಏಕತೆ ಹಾಗೂ ಕೇಂದ್ರೀಯತೆಯು ಭಾರತಕ್ಕೆ ಯಾವಾಗಲೂ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ. * 2022ರ ವರ್ಷವನ್ನು 'ಆಸಿಯಾನ್-ಭಾರತ ಸ್ನೇಹ ವರ್ಷ' ಎಂದು ಆಚರಣೆ ಮಾಡಲಾಗುತ್ತದೆ ಎಂದು ಮೋದಿ ಅವರು ತಿಳಿಸಿದ್ದಾರೆ. * ಪ್ರಧಾನಿ ಮೋದಿ ಇತ್ತೀಚಿಗೆ ಭಾರತ-ಆಸಿಯಾನ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು, ಈ ಸಭೆಯಲ್ಲಿ ಭಾರತದ ಇಂಡೊ-ಪೆಸಿಫಿಕ್ ಸಾಗರಗಳ ಯೋಜನೆಯು, ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಆಸಿಯಾನ್ ಕೂಟದ ಅಭಿಪ್ರಾಯಗಳಿಗೆ ಪರಸ್ಪರ ಸಹಕಾರವನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * 2022ರ ಆಸಿಯಾನ್-ಭಾರತ ಸ್ನೇಹವು 30 ವರ್ಷಗಳನ್ನು ಪೂರೈಸಲಿದೆ, ಈ ಹಿನ್ನಲೆಯಿಂದಾಗಿ ಭಾರತೀಯರಿಗೆ 'ಆಸಿಯಾನ್-ಭಾರತದ ಸ್ನೇಹ ವರ್ಷ' ಎಂದು ಆಚರಿಸಲು ಖುಷಿಯಾಗುತ್ತಿದೆ ಎಂದು ತಿಳಿಸಿದರು. * ಪ್ರಸ್ತುತ ಭಾರತ, ಅಮೆರಿಕ, ಚೀನಾ, ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ಇತರ ದೇಶಗಳು ಈ ಆಸಿಯಾನ್ ಅಂತರರಾಷ್ಟ್ರೀಯ ಕೂಟದ ಪಾಲುದಾರರಾಗಿದ್ದಾರೆ.