Job Description: * ಮೊಬೈಲ್ ಕರೆ ಮಾಡುವ ಸಂಧರ್ಭದಲ್ಲಿ ಗುರುತು ಪತ್ತೆ ಹಚ್ಚುವ ಟ್ರೂ ಕಾಲರ್ ಆಪ್ ಇದೀಗ ಭಾರತೀಯ ರೈಲ್ವೇ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದೆ. * ಇದೀಗ ಟ್ರೂ ಕಾಲರ್ IRCTC ಜಾಲತಾಣದಿಂದ ರೈಲ್ವೇ ಟಿಕೆಟ್ ಬುಕ್ ಮಾಡಿದ ಸಂದರ್ಭದಲ್ಲಿ ಬುಕಿಂಗ್ ಸಂದೇಶಗಳ ಅಧಿಕೃತ ಮಾಹಿತಿಯನ್ನು ಟ್ರೂಕಾಲರ್ ಖಚಿತಪಡಿಸಲಿದೆ, ಇದರಿಂದ ವಂಚನೆಗಳನ್ನು ತಡೆಗಟ್ಟಬಹುದು ಎಂದು ಭಾರತೀಯ ರೈಲ್ವೇ ತಿಳಿಸಿದೆ. * ಟ್ರೂ ಕಾಲರ್ ರೈಲ್ವೇ ಸಹಾಯವಾಣಿ 139 ಜೊತೆ ಮಾತನಾಡುವಾಗ ಭಾರತೀಯ ರೈಲ್ವೇ ಅಧಿಕೃತ ಲೋಗೋವನ್ನು ತೋರಿಸಲಿದೆ. * ಭಾರತೀಯ ರೈಲ್ವೇ 2007ರಲ್ಲಿ 139 ಸಹಾಯವಾಣಿಯನ್ನು ಭಾರತ್ ಬಿಪಿಒ ಸಹಯೋಗದಲ್ಲಿ ಆರಂಭಿಸಿದೆ. ಇದೀಗ ಪ್ರತಿದಿನವು ಸರಿ ಸುಮಾರು 2 ಲಕ್ಷ ರೈಲ್ವೇ ಗ್ರಾಹಕರು ಈ ಸಹಾಯವಾಣಿಯ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.