Job Description: * ಚೀನಾದ ಟೆಲಿಕಾಂ ಸಂಸ್ಥೆಯನ್ನು ಅಮೇರಿಕ ತನ್ನ ಮಾರುಕಟ್ಟೆಯಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದೆ. * ಪ್ರಸ್ತುತ ಚೀನಾ ದೇಶದೊಂದಿಗಿನ ಉದ್ವಿಗ್ನತೆ ಹಾಗೂ ಅಮೇರಿಕ ದೇಶವು ತನ್ನ ಭದ್ರತೆಗೆ ಬೆದರಿಕೆ ಉಂಟಾಗಿರುವ ಹಿನ್ನಲೆಯಿಂದಾಗಿ ಈ ನಿರ್ಣಯವನ್ನು ಕೈಗೊಂಡಿದೆ ಎನ್ನಲಾಗಿದೆ. * ಇದೀಗ ಅಮೇರಿಕಾದಲ್ಲಿ ಟೆಲಿಕಾಂ ಸೇವೆ ನೀಡುತ್ತಿರುವ ಚೀನಾ ಟೆಲಿಕಾಂ ಕಾರ್ಪೊರೇಶನ್ ಸಂಸ್ಥೆಯು ಅಂತರ್ರಾಜ್ಯ ಮತ್ತು ಅಂತರಾಷ್ಟ್ರೀಯ ಟೆಲಿಕಾಂ ಸೇವೆಯನ್ನು 60 ದಿನದೊಳಗೆ ಸ್ಥಗಿತಗೊಳಿಸುವಂತೆ ಫೆಡರಲ್ ಸಂವಹನ ಆಯೋಗವು ಆದೇಶವನ್ನು ಹೊರಡಿಸಿದೆ. * ಚೀನಾ ದೇಶದ ಟೆಲಿಕಾಂ ಸಂಸ್ಥೆಯಿಂದ ಅಮೇರಿಕದ ಮಾಹಿತಿ ಹಾಗೂ ಸಂಪರ್ಕ ಜಾಲಕ್ಕೆ ತೊಂದರೆಯಾಗುವ ನಿಟ್ಟಿನಲ್ಲಿ ಅಮೇರಿಕ ಈ ಕ್ರಮವನ್ನು ಕೈಗೊಂಡಿದೆ ಎನ್ನಲಾಗಿದೆ. * ಪ್ರಸ್ತುತ ಅಮೇರಿಕದಲ್ಲಿ ಟೆಲಿಕಾಂ ಸೇವೆಯನ್ನು ನೀಡುತ್ತಿರುವ ಚೀನಾ ಸರ್ಕಾರದ ನಿಯಂತ್ರಣದಲ್ಲಿರುವ 'ಚೀನಾ ಟೆಲಿಕಾಂ ಅಮೆರಿಕಾಸ್' ಸಂಸ್ಥೆಯಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಿದೆ ಎಂದು FCC ಹೇಳಿಕೆಯನ್ನು ನೀಡಿದೆ.