Job Description: * ಇತ್ತೀಚಿಗೆ ಭಾರತೀಯ ಸೇನೆಯು ಬ್ಯಾಲಿಸ್ಟಿಕ್ ಅಗ್ನಿ-5 ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ ಇದರಿಂದಾಗಿ ಭಾರತೀಯ ಸೇನೆಗೆ ಇನ್ನಷ್ಟು ಶಕ್ತಿ ಸಿಕ್ಕಿದಂತಾಗಿದೆ. * ಈ ಅಗ್ನಿ-5 ಕ್ಷಿಪಣಿಯು ನಿಖರವಾಗಿ 5,000 ಕಿ.ಮೀ ವ್ಯಾಪ್ತಿಯ ಗುರಿಗಳನ್ನು ಹೊಡೆದ ಉರಿಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಭಾರತೀತ ಸೇನೆ ತಿಳಿಸಿದೆ. * ಪ್ರಸ್ತುತ ಚೀನಾ ದೇಶದೊಂದಿಗಿನ ದೀರ್ಘಕಾಲದ ಗಡಿ ಬಿಕ್ಕಟ್ಟಿನ ನಡುವೆ ಪೂರ್ವ ಲಡಾಖ್ನಲ್ಲಿ ಈ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲಾಗಿದೆ. * ಅಗ್ನಿ ಕ್ಷಿಪಣೆಯ ಮಾಹಿತಿ: ಈ ಹಿಂದೆ 2012ರ ಏಪ್ರಿಲ್ 19ರಂದು ಭಾರತ ಅಗ್ನಿ-1 ಕ್ಷಿಪಣಿ ಪ್ರಯೋಗವನ್ನು ಮಾಡಿತ್ತು, ಇದು ಸುಮಾರು 700 ಕಿ. ಮೀ. ಸಾಗುವ ಸಾಮರ್ಥ್ಯವನ್ನು ಹೊಂದಿತ್ತು, ಮತ್ತೇ 2013ರ ಸೆಪ್ಟೆಂಬರ್ 15ರಂದು ಅಗ್ನಿ-2 ಪರೀಕ್ಷೆಯನ್ನು ನಡೆಸಲಾಯಿತು ಇದು ಸುಮಾರು 2000 ಕಿ. ಮೀ. ಸಾಗುವ ಸಾಮರ್ಥ್ಯವನ್ನು ಹೊಂದಿತ್ತು. * ಮತ್ತೇ 2015ರ ಜನವರಿ 31ರಂದು ಅಗ್ನಿ-3 ಕ್ಷಿಪಣಿ ಪ್ರಯೋಗ ನಡೆಸಲಾಗಿತ್ತು, ಇದು 3,500 ಕಿ. ಮೀ. ಸಾಗುವ ಸಾಮರ್ಥ್ಯವನ್ನು ಹೊಂದಿತ್ತು, ಅದೇ ವರ್ಷ 2015ರ ನವೆಂಬರ್ 9ರಂದು ಅಗ್ನಿ-4 ಕ್ಷಿಪಣಿ ಪ್ರಯೋಗವನ್ನು ನಡೆಸಲಾಯಿತು ಇದು ಸುಮಾರು 4000 ಕಿ. ಮೀ. ಸಾಗುವ ಸಾಮರ್ಥ್ಯವನ್ನು ಹೊಂದಿತ್ತು. * ಇದೀಗ ಭಾರತೀಯ ಸೇನೆಯು ಅಗ್ನಿ-5 ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ, ಇದು ಸುಮಾರು 5000ಕಿ. ಮೀ. ಸಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.