Job Description: * ಇದೀಗ ಕೇಂದ್ರ ಸರ್ಕಾರವು ದೇಶದಲ್ಲಿನ ಪ್ರತಿ ಪ್ರಜೆಗೂ ಕೋವಿಡ್-19 ಲಸಿಕೆ ನೀಡುವ ನಿಟ್ಟಿನಲ್ಲಿ ಮುಂಬರುವ ತಿಂಗಳಿನಿಂದ 'ಹರ್ ಘರ್ ದಸ್ತಕ್’ ಆಂದೋಲನ ಪ್ರಾರಂಭಿಸಲಾಗುತ್ತದೆ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯಾ ಅವರು ಮಾಹಿತಿ ನೀಡಿದ್ದಾರೆ. * ಈ 'ಹರ್ ಘರ್ ದಸ್ತಕ್’ ಆಂದೋಲನ ಅಡಿಯಲ್ಲಿ ಇಲ್ಲಿಯವರೆಗೆ ಮೊದಲನೇ ಡೋಸ್ ಲಸಿಕೆಯನ್ನು ಪಡೆಯದವರ ಮನೆ ಬಾಗಿಲಿಗೇ ತೆರಳಿ ಲಸಿಕೆ ನೀಡಲಾಗುತ್ತದೆ. * ಪ್ರಸ್ತುತ ದೇಶದಲ್ಲಿ ಇದೀಗ ಶೇ. 77 ಜನರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ, ಹಾಗೂ ಶೇ. 32 ಜನರು 2ನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯಾ ಅವರು ಹೇಳಿಕೆ ನೀಡಿದ್ದಾರೆ.