Job Description: * ಪ್ರಸ್ತುತ ಸರ್ಕಾರವು ಹೊಸ ಶಿಕ್ಷಣ ನೀತಿಯ ಅನುಸಾರವಾಗಿ 4 ವರ್ಷಗಳ ಸಮಗ್ರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮವನ್ನು ರೂಪಿಸಿದೆ, ಇದೀಗ ಬಿಎಡ್ ಕೋರ್ಸ್'ನ್ನು ಸಂಯೋಜಿಸಲಾಗುತ್ತದೆ, ಹಾಗು ಇದು 4 ವರ್ಷಗಳ ಅವಧಿಯ ಕೋರ್ಸ್ಆಗಿರಲಿದೆ. * ಪ್ರಸ್ತುತ ಶಿಕ್ಷಣ ನೀತಿಯು ಪ್ರಾದೇಶಿಕ ಭಾಷೆಯಲ್ಲಿ ಬೋಧನೆ, ಶಾಲಾ ಮಕ್ಕಳಿಗೆ ಕೋಡಿಂಗ್ ಕಲಿಕೆ ಪರಿಚಯಿಸಲಿದೆ, ಇದಕ್ಕೆ ಅನುಗುಣವಾಗಿ ಶಿಕ್ಷಕರನ್ನು ಸಿದ್ಧಪಡಿಸುತ್ತವೆ ಮತ್ತು ಹೊಸ ಪಠ್ಯಕ್ರಮವನ್ನು ಹೊಂದಿರುತ್ತವೆ ಎಂದು ಮಾಜಿ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಈ ಹಿಂದೆ ಘೋಷಣೆ ಮಾಡಿದ್ದರು. * ಸರ್ಕಾರವು 4 ವರ್ಷಗಳ ಸಮಗ್ರ ಬಿಎಡ್ ಕೋರ್ಸ್'ನ್ನು 2030 ರ ಅವಧಿಗೆ ಬೋಧನೆಗೆ ಅಗತ್ಯವಿರುವ ಕನಿಷ್ಠ ಪದವಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ, ಅಷ್ಟೇ ಅಲ್ಲದೇ ಈ 4 ವರ್ಷಗಳ ಐಟಿಇಪಿ ಯ ಆರಂಭವು 2022-23 ರ ಶೈಕ್ಷಣಿಕ ವರ್ಷದಿಂದ ಚಾಲ್ತಿಯಲ್ಲಿರಲಿದೆ.