Job Description: * ಪ್ರಸ್ತುತ ಶ್ರೀಲಂಕಾ ದೇಶವು ವಿದೇಶಿ ವಿನಿಮಯ ಬಿಕ್ಕಟ್ಟಿಗೆ ಸಿಲುಕಿಕೊಂಡಿದೆ, ಇದೀಗ ಈ ದ್ವೀಪ ರಾಷ್ಟ್ರ ಶ್ರೀಲಂಕಾ ಕಚ್ಚಾ ತೈಲ ಖರೀದಿಸಲು ಭಾರತದಿಂದ 500 ಮಿಲಿಯನ್ ಡಾಲರ್ ಸಾಲವನ್ನು ಕೇಳಿದೆ. * ಶ್ರೀಲಂಕಾ ದೇಶದಲ್ಲಿ ಮುಂದಿನ ಜನೇವರಿವರೆಗೆ ಮಾತ್ರ ಇಂಧನದ ಲಭ್ಯತೆ ಇದೇ ಎಂದು ಅಲ್ಲಿನ ಇಂಧನ ಸಚಿವ ಉದಯ ಗಮ್ಮನಪಿಲ ಅವರು ತಿಳಿಸಿದ್ದಾರೆ, ಈ ಹಿನ್ನಲೆಯಿಂದಾಗಿ ಶ್ರೀಲಂಕಾ ತೈಲ ಖರೀದಿಗಾಗಿ ಭಾರತಕ್ಕೆ ಸಾಲ ಕೇಳಿಕೊಂಡಿದೆ. * ಪ್ರಸ್ತುತ ಶ್ರೀಲಂಕಾ ದೇಶದ ಎರಡು ಪ್ರಮುಖ ರಾಷ್ಟ್ರೀಯ ಬ್ಯಾಂಕ್ಗಳಾದ 'ಬ್ಯಾಂಕ್ ಆಫ್ ಸಿಲೋನ್' ಹಾಗೂ 'ಪೀಪಲ್ಸ್ ಬ್ಯಾಂಕ್' ಬಳಿ ಸರ್ಕಾರಿ ಸ್ವಾಮ್ಯದ, 'ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ಸುಮಾರು 3.3 ಬಿಲಿಯನ್ ಡಾಲರ್ ಬಾಕಿ ಹಣವನ್ನು ಉಳಿಸಿಕೊಂಡಿದೆ, ಇದೀಗ ದೇಶದ ತೈಲ ವಿತರಕರು ಮಧ್ಯಪ್ರಾಚ್ಯದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. * ಭಾರತ-ಶ್ರೀಲಂಕಾ ಆರ್ಥಿಕ ಪಾಲುದಾರಿಕೆ ವ್ಯವಸ್ಥೆ' ಅಡಿಯಲ್ಲಿ 3,751 ಕೋಟಿ ರೂ. ನೆರವು ಪಡೆಯಲು ಸಾಧ್ಯವೇ ಎಂಬುವದನ್ನು ಭಾರತದ ಹೈಕಮಿಷನರ್ ಮೂಲಕ ಪ್ರಯತ್ನ ನಡೆಸಲಾಗುತ್ತಿದೆ,' ಎಂದು ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (ಸಿಪಿಸಿ) ಅಧ್ಯಕ್ಷ ಸುಮಿತ್ ವಿಜಯ ಸಿಂಘೆ ತಿಳಿಸಿದ್ದಾರೆ.