Job Description: * ಇನ್ನು ಮುಂದೆ ಉಚಿತವಾಗಿ ಇಂಟರ್ನೆಟ್ ಸೇವೆಯನ್ನು ದೆಹಲಿಯಲ್ಲಿನ ಮೆಟ್ರೊ ರೈಲು ಪ್ರಯಾಣಿಕರು ಪಡೆಯಬಹುದು, ಈ ಹೈಸ್ಪೀಡ್ ವೈ-ಫೈ ಉಚಿತ ಸೇವೆಗೆ ಮೆಟ್ರೊ ರೈಲು ಸೇವೆಯ ಹಳದಿ ಮಾರ್ಗದಲ್ಲಿ ಪ್ರಾರಂಭಿಸಲಾಗಿದೆ ಎಂದು ದೆಹಲಿ ಮೆಟ್ರೊ ರೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಈ ಮೊದಲು 2020ರ ಜನೇವರಿಯಲ್ಲಿ ದೆಹಲಿ ಮೆಟ್ರೊ ರೈಲು ನವದೆಹಲಿ ಹಾಗೂ ದ್ವಾರ್ಕಾ ಸೆಕ್ಟರ್ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಕೋಚ್ ಒಳಗಡೆ ಈ ವೈ-ಫೈ ಸೌಲಭ್ಯ ಕಲ್ಪಿಸಿತ್ತು, ಇದೀಗ ಒಂದೇ ವರ್ಷದ ಅವಧಿಯಲ್ಲಿ ಹಳದಿ ಮಾರ್ಗದಲ್ಲಿಯೂ ಕೂಡ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ. * ದೆಹಲಿ ಮೆಟ್ರೊ ರೈಲು ಈತರಹದ ಉಚಿತ ವೈ-ಫೈ ಸೌಲಭ್ಯವನ್ನು ಕಲ್ಪಿಸಿರುವ ದಕ್ಷಿಣ ಏಷಿಯಾ ವಲಯದಲ್ಲಿಯೇ ಇದೇ ಮೊದಲ ಮೆಟ್ರೊ ರೈಲಾಗಿದೆ.