Job Description: * ಪ್ರಸ್ತುತ ರಷ್ಯಾದ ಚಿತ್ರ ತಂಡವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 12 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆಸಿ ನಂತರ ಭೂಮಿಗೆ ಮರಳಿದ್ದಾರೆ ಎಂದು ತಿಳಿಸಲಾಗಿದೆ. * ರಷ್ಯಾದ ಈ ಚಿತ್ರವು ಬಾಹ್ಯಾಕಾಶದಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದಿದ್ದಾರೆ. * ರಷ್ಯಾದ ಚಿತ್ರ ತಂಡವು 'ದಿ ಚಾಲೆಂಜ್' ಎಂಬ ಚಿತ್ರದ ಕೆಲ ದೃಶ್ಯಗಳನ್ನು ಚಿತ್ರೀಕರಿಸಲು ನಟಿ ಯುಲಿಯಾ ಪೆರಿಸಿಲ್ಡ್, ಹಾಗು ನಿರ್ದೇಶಕ ಲಿಮ್ ಶಿಪೆಂಕೊ ಅವರು ಹಿರಿಯ ಗಗನಯಾತ್ರಿ ಅಂಟೊನ್ ಕಪ್ಲೆರೊವ್ ಅವರ ಜೊತೆಯಾಗಿ ಕಜಕಿಸ್ತಾನದ ಬೈಕೋನೂರ್ ಕಾಸ್ಮೋಡ್ರೋಮ್ನಿಂದ ಇದೇ ತಿಂಗಳ ಪ್ರಾರಂಭದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಕೈಗೊಂಡಿದ್ದರು. * ರಷ್ಯಾದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸಿಬ್ಬಂದಿ ಒಲೆಗ್ ನೊವಿಟ್ಸ್ಕಿ, ನಟಿ ಯುಲಿಯಾ ಪೆರೆಸಿಲ್ಡ್, ನಿರ್ದೇಶಕ ಲಿಮ್ ಶಿಪೆಂಕೊ ಇವರುಗಳು 'ಸೊಯುಜ್ ಎಂಎಸ್ -18' ಹೆಸರಿನ ಬಾಹ್ಯಾಕಾಶ ಗಗನ ನೌಕೆ ಮೂಲಕ ಕಜಕ್ಸ್ತಾನ ಹೊರವಲಯದಲ್ಲಿ ಬಂದು ತಲಿಪಿದ್ದಾರೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್ ತಿಳಿಸಿದೆ.