Job Description: * ಜಾಗತಿಕ ಕೈತೊಳೆಯುವ ದಿನವನ್ನು ಜಾಗತಿಕವಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಜನರನ್ನು ಸುರಕ್ಷಿತ ಹಾಗೂ ಕೈ ನೈರ್ಮಲ್ಯದ ಮಹತ್ವದ ಬಗ್ಗೆ ತಿಳುವಳಿಕೆಯನ್ನು ನೀಡಲು ಪ್ರತಿ ವರ್ಷ ಅಕ್ಟೋಬರ್ 15 ರಂದು ಆಚರಿಸಲಾಗುತ್ತದೆ. * 'ನಮ್ಮ ಭವಿಷ್ಯವು ಹತ್ತಿರದಲ್ಲಿದೆ, ಹಾಗೂ ಒಟ್ಟಿಗೆ ಸಾಗೋಣ' ಎಂಬ ಧೆಯೇ ವ್ಯಾಕ್ಯದ ಅಡಿಯಲ್ಲಿ 2021 ರ ಜಾಗತಿಕ ಕೈತೊಳೆಯುವ ದಿನ ಆಚರಿಸಲಾಗಿದೆ. * ಈ ಜಾಗತಿಕ ಕೈತೊಳೆಯುವ ದಿನವು ಕೋವಿಡ್ -19 ಸಾಂಕ್ರಾಮಿಕ ರೋಗದ ನಡುವೆ ಅತೀ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ, ಹಾಗೂ ಹಲವಾರು ಜೀವಗಳನ್ನು ಬದುಕಿಸಲು ಮತ್ತು ವೈರಲ್ ಸೋಂಕು ಮತ್ತು ಜ್ವರವನ್ನು ತಡೆಗಟ್ಟಲು ಸಹಾಯವಾಗಿದೆ. * ಪ್ರತಿವರ್ಷವು ಭಾರತದಲ್ಲಿ ಸುಮಾರು 1ಲಕ್ಷ ಮಕ್ಕಳು ಅತಿಸಾರದಿಂದ ಸಾಯುತ್ತಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ವರದಿ ಮಾಡಿದೆ, ಯುನಿಸೆಫ್ ಪ್ರಕಾರ ಕೈ ತೊಳೆಯುವ ಮೂಲಕ ಶೇ. 40 ರಷ್ಟು ಅತಿಸಾರವನ್ನು ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ. *ಕನಿಷ್ಠ ಪಕ್ಷ 20 ಸೆಕೆಂಡುಗಳ ಕಾಲ ಸೋಪ್ ಮತ್ತು ನೀರಿನಿಂದ ಕೈಗಳನ್ನು ತೊಳೆಯಬೇಕು. * ಈ ಜಾಗತಿಕ ಕೈತೊಳೆಯುವ ದಿನವನ್ನು 2008 ರಲ್ಲಿ 'ಜಾಗತಿಕ ಕೈತೊಳೆಯುವ ಪಾಲುದಾರಿಕೆ'(Global Handwashing Partnership)(GHP) ಸ್ಥಾಪಿಸಿದೆ.