Job Description: * ಪ್ರಸ್ತುತ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು 'ಮೈಪಾರ್ಕಿಂಗ್ಸ್' ಆಪ್'ನ್ನು ಇದೇ ಅಕ್ಟೋಬರ್. 14 ರಂದು ಬಿಡುಗಡೆ ಮಾಡಿದ್ದಾರೆ. * ಮೈಪಾರ್ಕಿಂಗ್ಸ್ ಆಪ್'ನ ಮೂಲಕ ಜನರು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಆನ್ಲೈನ್ನಲ್ಲಿ ಪಾರ್ಕಿಂಗ್ ಸ್ಲಾಟ್ಗಳನ್ನು ಬುಕ್ ಮಾಡಬಹುದು. * ಪ್ರಸ್ತುತ ಈಗಿರುವ ವಾಹನ ಪಾರ್ಕಿಂಗ್ ದಟ್ಟಣೆ ಸಮಸ್ಯೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಈ MyParkings ಆಪ್'ನ್ನು ಪ್ರಾರಂಭಿಸಲಾಗಿದೆ, ಈ ಆಪ್ ಆ ಪ್ರದೇಶದಲ್ಲಿ ನಿಲ್ಲಿಸಬಹುದಾದ ಒಟ್ಟು ವಾಹನಗಳ ಸಾಮರ್ಥ್ಯ, ಹಾಗೂ ಪ್ರತಿಯೊಂದು ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡಿರುವ ಮತ್ತು ಪಾರ್ಕಿಂಗ್ ಮಾಡಲು ಲಭ್ಯವಿರುವ ಸ್ಥಳಗಳ ಮಾಹಿತಿಯನ್ನು ನೀಡುತ್ತದೆ. * ಈ MyParkings ಆಪ್'ನ್ನು ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ಅಭಿವೃದ್ಧಿಪಡಿಸಿದೆ. * ಈ ಪಾರ್ಕಿಂಗ್ ವ್ಯಸ್ಥೆಯು SDMC ನ್ಯಾಯವ್ಯಾಪ್ತಿಯಲ್ಲಿ ಬರಲಿದೆ, ಹಾಗೂ ಈ ಆಪ್ SDMC'ನ ನಾಲ್ಕು ವಲಯಗಳಲ್ಲಿ 145 ಸರ್ಫೇಸ್ ಪಾರ್ಕಿಂಗ್ ತಾಣಗಳನ್ನು ನಿರ್ವಹಿಸುತ್ತದೆ.