Job Description: * ಪ್ರಸ್ತುತ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಟಾರ್ಟಜಿ ಆಂಡ್ ಡೆವಲಪ್ಮೆಂಟ್ ಮುಖ್ಯಾಧಿಕಾರಿ ಸಾತ್ಯಕಿ ರಘುನಾಥ್ ವರದಿ ಮಾಡಿರುವ ಪ್ರಕಾರ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅತಿಹೆಚ್ಚು ಪೆರಿಷಬಲ್ ಪದಾರ್ಥಗಳ ಸರಕು ಸಾಗಣೆ ಮಾಡಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ 2020-21 ಹಣಕಾಸು ವರ್ಷದಲ್ಲಿ 41,130 ಮೆಟ್ರಿಕ್ ಟನ್ಗಳಷ್ಟು ಕಡಿಮೆ ಬಾಳಿಕೆ ಅವಧಿ ಹಣ್ಣು, ತರಕಾರಿಯಂಥ (ಪೆರಿಷಬಲ್) ಉತ್ಪನ್ನ ರಪ್ತು ಮಾಡಲಾಗಿದೆ, ಎಂದು ಕೃಷಿ ಮತ್ತು ಸಂಸ್ಕರಿಸಿದ ಉತ್ಪನ್ನಗಳ ರಫ್ತು ಅಭಿವೃದ್ಧಿ ಮಂಡಳಿ ಮಾಹಿತಿ ನೀಡಿದೆ. * ದೇಶದ ಒಟ್ಟು ಪೆರಿಷಬಲ್ ಉತ್ಪನ್ನಗಳ ಪೈಕಿ ಶೇ. 31ರಷ್ಟು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದಲೇ ಸಾಗಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ, ಅಷ್ಟೇ ಅಲ್ಲದೇ 1,296 ಮೆಟ್ರಿಕ್ ಟನ್ ಹೂವು ರಫ್ತುಮಾಡಲಾಗಿದೆ ಎಂದಿದ್ದಾರೆ. * ಒಟ್ಟು 24 ವಿಮಾನಯಾನ ಸಂಸ್ಥೆಗಳು 46 ವಿದೇಶಗಳಲ್ಲಿ ಪೆರಿಷಬಲ್ ಉತ್ಪನ್ನ ರಫ್ತು ಮಾಡುತ್ತಿವೆ.