Job Description: * ದೆಹಲಿ ಸರ್ಕಾರವು ಇದೇ ಅಕ್ಟೋಬರ್ 11 ರಂದು 'ದೇಶ್ ಕೆ ಮೆಂಟರ್ಸ್' ಎಂಬ ಕಾರ್ಯಕ್ರಮವನ್ನು ಆರಂಭಿಸಿತು, ಪ್ರಸ್ತುತ ಈ ಕಾರ್ಯಕ್ರಮವು ದೆಹಲಿಯ ಎಲ್ಲಾ ಶಾಲೆಗಳಲ್ಲಿ ಜಾರಿಗೆ ತರಲಾಗುತ್ತಿದೆ. * ದೆಹಲಿ ಸರ್ಕಾರವು ವಿದ್ಯಾರ್ಥಿಗಳಿಗೆ ಯುವ ಮಾರ್ಗದರ್ಶಕರನ್ನು ನೀಡುವ ನಿಟ್ಟಿನಲ್ಲಿಈ ಕಾರ್ಯಕ್ರಮವನ್ನು ಪ್ರಾರಂಭಿಸಿದೆ, ಇಲ್ಲಿನ ಯುವ ಮಾರ್ಗದರ್ಶಕರು 9 ನೇ ತರಗತಿಯಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಮಾರ್ಗದರ್ಶನವನ್ನು ನೀಡಲಿದ್ದಾರೆ. * ಪ್ರಸ್ತುತ ದೆಹಲಿಯ ತಾಂತ್ರಿಕ ವಿಶ್ವವಿದ್ಯಾಲಯದ ತಂಡವು ರಚಿಸಿರುವ ಆ್ಯಪ್ ಮೂಲಕ ಮಾರ್ಗದರ್ಶನ ಪಡೆಯಲು ವಿದ್ಯಾರ್ಥಿಗಳು ಸೈನ್ ಅಪ್ ಮಾಡಬಹುದು. * ದೆಹಲಿ ಸರ್ಕಾರದ ಈ 'ದೇಶ್ ಕೆ ಮೆಂಟರ್ಸ್ ಕಾರ್ಯಕ್ರಮ' ಕನಿಷ್ಠಪಕ್ಷ ಎರಡು ತಿಂಗಳವರೆಗೆ ವಿದ್ಯಾರ್ಥಿಗಳಿಗೆ ಲಭ್ಯವಿರಲಿದೆ, ಇದಾಗಿಯೂ ಹೆಚ್ಚುವರಿಯಾಗಿ '4'ತಿಂಗಳವರೆಗೆ ಮುಂದುವರಿಸಬಹುದು ಎಂದು ತಿಳಿಸಿದ್ದಾರೆ, ಇದರಲ್ಲಿ ಒಬ್ಬ ಮಾರ್ಗದರ್ಶಕರು 2 ರಿಂದ 5 ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.