Job Description: * ಮೈಕ್ರೋಸಾಫ್ಟ್ನ ಸಿಇಒ ಹಾಗೂ ಭಾರತೀಯ ಅಮೆರಿಕನ್ ಸತ್ಯ ನಾದೆಲ್ಲಾ ಅವರನ್ನು 'ಗ್ಲೋಬಲ್ ಬಿಸಿನೆಸ್ ಸಸ್ಟೇನಬಿಲಿಟಿ ಲೀಡರ್ಷಿಪ್'ಗಾಗಿ ನೀಡುವ ಪ್ರತಿಷ್ಠಿತ ಸಿ.ಕೆ.ಪ್ರಹ್ಲಾದ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಯನ್ನು ಉದ್ಯಮ ಹಾಗೂ ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ತೋರಿದ ನಾಯಕತ್ವಕ್ಕಾಗಿ ನೀಡಲಾಗಿದೆ ಎಂದು ಈ ಪ್ರತಿಷ್ಠಿತ ಪ್ರಶಸ್ತಿ ನೀಡುವ 'ಕಾರ್ಪೋರೇಟ್ ಇಕೊ ಫೋರಂ'ನ ಸಂಸ್ಥಾಪಕ ಎಂ.ಆರ್.ರಂಗಸ್ವಾಮಿ ತಿಳಿಸಿದ್ದಾರೆ. * ಇವರ ಜೊತೆಗೆ ಮೈಕ್ರೋಸಾಫ್ಟ್ನ ಉನ್ನತ ಅಧಿಕಾರಿಗಳಾದ, ಅಧ್ಯಕ್ಷ ಬ್ರ್ಯಾಡ್ ಸ್ಮಿತ್, ಮುಖ್ಯ ಹಣಕಾಸು ಅಧಿಕಾರಿ ಅಮಿ ಹೂಡ್ ಹಾಗೂ ಮುಖ್ಯ ಪರಿಸರ ಅಧಿಕಾರಿ ಲೂಕಾಸ್ ಜೊಪ್ಪಾ ಅವರು ಸಹ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಈ ಪ್ರಶಸ್ತಿಯನ್ನು ಪರಿಸರಕ್ಕೆ ಇಂಗಾಲ ಸೇರುವುದನ್ನು ತಡೆಗಟ್ಟಲು ಕಂಪನಿ ಕೈಗೊಂಡ ಕ್ರಮಗಳನ್ನು ಪರಿಗಣಿಸಿ ನೀಡಲಾಗಿದೆ. * 2030ರ ವೇಳೆಗೆ ಮೈಕ್ರೋಸಾಫ್ಟ್ಅನ್ನು 'ಕಾರ್ಬನ್ ನೆಗೆಟಿವ್ ಕಂಪನಿ'ಯನ್ನಾಗಿ ಪರಿವರ್ತಿಸಲು ಈ ನಾಲ್ವರ ಸಂಘಟಿತ ಪ್ರಯತ್ನ, ನಾಯಕತ್ವ ಅನುಕರಣೀಯ' ಎಂದು ಎಂ.ಆರ್.ರಂಗಸ್ವಾಮಿ ತಿಳಿಸಿದ್ದಾರೆ.