Job Description: * ಪ್ರಸ್ತುತ ಈ ‘ಆಕಾಶ ಏರ್’ ಎಂಬ ಹೊಸ ವಿಮಾನಯಾನ ಸಂಸ್ಥೆಯು 2022 ರ ಮಧ್ಯದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎನ್ನಲಾಗಿದೆ, ಅಷ್ಟೇ ಅಲ್ಲದೇ ಇದು ಮುಂಬರುವ '4' ವರ್ಷಗಳಲ್ಲಿ ಅಂದಾಜು 70 ವಿಮಾನಗಳನ್ನು ನಿರ್ವಹಿಸಲು ಏರ್ಲೈನ್'ನ್ನು ನಿಯೋಜಿಸಲಿದೆ. * ಈ ‘ಆಕಾಶ ಏರ್’ಲೈನ್ ಅಲ್ಟ್ರಾ-ಕಡಿಮೆ-ವೆಚ್ಚದ ಕ್ಯಾರಿಯರ್ ಸೇವೆಯಾಗಿದೆ, ಇದನ್ನು ರಾಕೇಶ್ ಜುಂಜುನ್ವಾಲಾ ಪ್ರಾರಂಭಿಸಿದ್ದಾರೆ, ಅಷ್ಟೇ ಅಲ್ಲದೇ ಇವರು ಈ ಕಂಪನಿಯಲ್ಲಿ ಸುಮಾರು ಶೇ. 40 ರಷ್ಟು ಪಾಲನ್ನು ಹೊಂದಿದ್ದಾರೆ. * ಜೆಟ್ ಏರ್ವೇಸ್ನ ಮಾಜಿ ಸಿಇಒ ವಿನಯ್ ದುಬೆ ಆಕಾಶ ಕಂಪನಿಯ ಸಿಇಒ(CEO) ಆಗಿದ್ದಾರೆ, ಹಾಗೂ ಆದಿತ್ಯ ಘೋಷ್ ಜುಂಜುನ್ವಾಲಾ ಅವರ ನಾಮಿನಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. * ULCC ಎಂದರೆ 'ಅತಿ ಕಡಿಮೆ ಬೆಲೆಯ ವಾಹಕಗಳು' ಎಂದರ್ಥ, ಪ್ರಸ್ತುತ ಈ ಏರ್ಲೈನ್ ಕಂಪನಿಯು ಇಂಡಿಗೊ ಹಾಗೂ ಸ್ಪೈಸ್ ಜೆಟ್ ನಂತಹ ಸಾಮಾನ್ಯ ಬಜೆಟ್ ವಿಮಾನಯಾನಗಳಿಗಿಂತ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ, ಅಷ್ಟೇ ಅಲ್ಲದೇ ಚೆಕ್-ಇನ್ ಬ್ಯಾಗೇಜ್, ಕ್ಯಾಬಿನ್ ಬ್ಯಾಗೇಜ್, ಇತ್ಯಾದಿ ಸೇವೆಗಳನ್ನು ಕಡಿಮೆ ದರಗಳೊಂದಿಗೆ ಕಾರ್ಯನಿರ್ವಹಿಸುತ್ತವೆ ಆದರೆ ULCC ಕನಿಷ್ಠ ವೆಚ್ಚದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಿದೆ.