Job Description: * ರಜನೀಶ್ ಕುಮಾರ್ ಭಾರತ್ ಪೇ ಮಂಡಳಿಗೆ ಅಧ್ಯಕ್ಷರಾಗಿ ಸೇರ್ಪಡೆಯಾಗಿದ್ದಾರೆ, ಇವರು ಈ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥರಾಗಿದ್ದರು. * ಭಾರತ್ ಪೇ-ಸೆಂಟ್ರಮ್ ಕ್ಯಾಪಿಟಲ್ ಪಂಜಾಬ್ ಮಹಾರಾಷ್ಟ್ರ ಬ್ಯಾಂಕ್'ನ್ನು ಸ್ವಾಧೀನಪಡಿಸಿಕೊಳ್ಳುವ ಸಣ್ಣ ಹಣಕಾಸು ಬ್ಯಾಂಕ್ ಸ್ಥಾಪಿಸಲು(RBI) ಭಾರತೀಯ ರಿಸರ್ವ್ ಬ್ಯಾಂಕ್'ನಿಂದ ಇನ್-ಪ್ರಿನ್ಸಿಪಲ್ ಅನುಮೋದನೆಯನ್ನು ಪಡೆದುಕೊಂಡಿದೆ. * ರಜನೀಶ್ ಕುಮಾರ್ ಅವರು ಭಾರತ್ ಪೇ ಅಧ್ಯಕ್ಷರಾಗಿ, ವ್ಯಾಪಾರ ಕಾರ್ಯಕ್ಷಮತೆ ಮತ್ತು ಕಾರ್ಪೊರೇಟ್ ಆಡಳಿತದ ವಿಷಯಗಳ ಬಗೆಗಿನ ಭಾರತ್ ಪೇ ನಿರ್ವಹಣೆಗೆ ಸಲಹೆಗಳನ್ನೂ ನೀಡುತ್ತಾರೆ. * ಇತ್ತೀಚಿಗೆ 2020ರ ಅಕ್ಟೋಬರ್'ನಲ್ಲಿ ರಜನೀಶ್ ಕುಮಾರ್ ಅವರು ಭಾರತದ ಅತಿದೊಡ್ಡ ಸಾಲ ಒದಗಿಸುವ SBIನ ಅಧ್ಯಕ್ಷರಾಗಿ ತಮ್ಮ ಅವಧಿಯನ್ನು ಮುಕ್ತಾಯ ಮಾಡಿದ್ದರು. * ರಜನೀಶ್ ಕುಮಾರ್ ಅವರು ಪ್ರಸ್ತುತ ಆಂಧ್ರಪ್ರದೇಶ ಸರ್ಕಾರದ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಅಷ್ಟೇ ಅಲ್ಲದೇ ಈ ಮೊದಲು ಇವರು ರಾಷ್ಟ್ರೀಯ ಬ್ಯಾಂಕಿಂಗ್ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.