Job Description: * ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 'ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆ'ಯ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. * ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸಮಗ್ರ ಬೆಂಬಲ ನೀಡುವ ವಿಷಯಗಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. * ಪ್ರಧಾನಿ ನರೇಂದ್ರ ಮೋದಿ ಅವರು 2021 ರ ಮೇ. 29 ರಂದು ಈ ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆ ಮಾರ್ಗಸೂಚಿಗಳನ್ನು ಘೋಷಣೆ ಮಾಡಿದ್ದರು. * ಈ ಮಕ್ಕಳಿಗಾಗಿ PM CARES ಯೋಜನೆಯ ಸಾಂಕ್ರಾಮಿಕ ರೋಗ ಕೋವಿಡ್-19 ನಿಂದಾಗಿ ತಮ್ಮ ಪೋಷಕರನ್ನು ಅಥವಾ ಮಕ್ಕಳನ್ನು ಕಳೆದುಕೊಂಡವರ ಸಮಗ್ರ ರಕ್ಷಣೆಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. * ಈ ಯೋಜನೆಯು ಮೂಲಕ ಆರೋಗ್ಯ ವಿಮೆಯನ್ನು ನೀಡಲಾಗುತ್ತದೆ, ಹಾಗೂ ಶಿಕ್ಷಣದಿಂದ ಸಬಲೀಕರಣಗೊಳಿಸುತ್ತದೆ, ಅಷ್ಟೇ ಅಲ್ಲದೇ ಇವರು 23 ನೇ ವಯಸ್ಸನ್ನು ತಲುಪಿದಾಗ ಆರ್ಥಿಕ ಬೆಂಬಲವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಮೋದಿ ಅವರು ಘೋಷಣೆ ಮಾಡಿರುವ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು 2021 ರ ಮೇ. 29 ರಿಂದ 2021 ರ ಡಿಸೆಂಬರ್. 31 ರವರೆಗೆ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ, ಅಷ್ಟೇ ಅಲ್ಲದೇ ಈ ಯೋಜನೆಯು ನೋಂದಾಯಿಸಿಕೊಂಡ ಮಕ್ಕಳ 23 ವರ್ಷ ವಯಸ್ಸಿನವರೆಗೂ ಈ ಯೋಜನೆ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.