Job Description: ರಾಜ್ಯ ಸಾರಿಗೆ ಸಂಸ್ಥೆಯಾದ KSRTC ಯೋಜನೆಗಳಾದ 'ಫ್ಲೈಬಸ್' ಮತ್ತು 'ಸ್ವಚ್ಛತೆಯೇ ಸೇವೆ' ಗಳನ್ನೂ ಪರಿಗಣಿಸಿ CMAK(ಸಿಟಿ ಮ್ಯಾನೇಜರ್ಸ್ ಅಸೋಸಿಯೇಷನ್) ಸಂಸ್ಥೆಯ 2018-19ನೇ ಸಾಲಿನ ಮೊದಲನೆಯ ಮತ್ತು 2019-20ನೇ ಸಾಲಿನ ದ್ವಿತೀಯ ಪ್ರಶಸ್ತಿಗಳನ್ನೂ ನೀಡಿದೆ. ಈ ಪ್ರಶಸ್ತಿಗಳು ತಲಾ ₹1 ಲಕ್ಷ ಮತ್ತು ₹75 ಸಾವಿರ ನಗದು ಬಹುಮಾನ ಒಳಗೊಂಡಿದ್ದವು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಇವರು ಪ್ರಶಸ್ತಿಯನ್ನು ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಸಮರ್ಪಿಸಲಾಗಿದೆ ಎಂದು ತಿಳಿಸಿದರು. ಇನ್ನು BMTC ಸಂಸ್ಥೆಗೆ 2018-19ನೇ ಸಾಲಿನ ದ್ವಿತೀಯ ಮತ್ತು 2019-20ನೇ ಸಾಲಿನ ಪ್ರಥಮ ಬಹುಮಾನ ದೊರೆತಿದ್ದು, ಪ್ರಶಸ್ತಿಗಳನ್ನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಸ್ವೀಕರಿಸಿದರು.