Job Description: * ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂದಿನ ಆರ್ಥಿಕ ಚೇತರಿಕೆಗೆ ನೆರವಾಗುವ ನಿಟ್ಟಿನಲ್ಲಿ ಪ್ರಮುಖ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿಟ್ಟಿದೆ. * RBI ಹಣಕಾಸು ನೀತಿ ಸಮಿತಿಯು ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ತರದೇ ರಿವರ್ಸ್ ರೆಪೋ ದರವನ್ನು ಶೇ. 3.35 ರೊಂದಿಗೆ ಯಥಾಸ್ಥಿತಿಯಲ್ಲಿಟ್ಟಿದೆ. * RBI ಸತತ 8 ನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. * ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು 6 ಸದಸ್ಯರ ಹಣಕಾಸು ನೀತಿ ಸಮಿತಿ ಜೊತೆಗೆ '3' ದಿನಗಳ ಸಭೆ ನಡೆಸಿದ ಈ ಹೊಸ ಹಣಕಾಸು ನೀತಿಯನ್ನು ಘೋಷಣೆ ಮಾಡಿದ್ದಾರೆ. * ಭಾರತೀಯ ಆರ್ಥಿಕತೆಯು ಚೇತರಿಕೆಯಾಗುತ್ತಿದೆ, ಪ್ರಸ್ತುತ ಭಾರತವು 2021-22 ರ ಆರ್ಥಿಕ ವರ್ಷದಲ್ಲಿ 9.5 ಶೇಕಡಾ ಜಿಡಿಪಿಯನ್ನು ಸಾಧಿಸುವ ಪಥದಲ್ಲಿದೆ ಎಂದು RBI ಗವರ್ನರ್ ಮಾಹಿತಿ ನೀಡಿದ್ದಾರೆ, ಅಷ್ಟೇ ಅಲ್ಲದೇ ಗ್ರಾಹಕರ ಅನುಕೂಲಕ್ಕಾಗಿ IMPS ವಹಿವಾಟಿನ ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಏರಿಸಲಾಗಿದೆ ಎಂದು ತಿಳಿಸಿದ್ದಾರೆ.