Job Description: * ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ಅನ್ಶು ಮಲಿಕ್ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ, ಮತ್ತು ಸರಿತಾ ಮೊರ್ ಅವರು ಕಂಚಿನ ಪದಕವನ್ನು ಜಯಿಸಿದ್ದಾರೆ. * ವಿಶ್ವ ಕುಸ್ತಿ ಚಾಂಪಿಯನ್ಷಿಪ್ನ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಭಾರತೀಯ ಕುಸ್ತಿಪಟುಗಳು ಪಾಲ್ಗೊಂಡಿದ್ದರು. * ಪ್ರಸ್ತುತ ಇದೇ ಮೊದಲ ಬಾರಿ ವಿಶ್ವ ಮಹಿಳಾ ಕುಸ್ತಿಯಲ್ಲಿ ಭಾರತಕ್ಕೆ ಬೆಳ್ಳಿ ಲಭಿಸಿದೆ, ಈ ಮೊದಲು 2006 ರಲ್ಲಿ ಅಲ್ಕಾ ತೋಮರ್ ಅವರಿಗೆ ಕಂಚು, ಮತ್ತೆ 2012 ರಲ್ಲಿ ಗೀತಾ ಪೋಗಟ್ ಹಾಗೂ ಬಬಿತಾ ಪೋಗಟ್ ಅವರಿಗೂ ಕಂಚು, ಮತ್ತೇ 2018 ರಲ್ಲಿ ಪೂಜಾ ದಂಡಾ ಅವರಿಗೆ ಕಂಚು, ಕೊನೆಯದಾಗಿ 2019 ರಲ್ಲಿಯೂ ಕೂಡ ವಿನೇಶಾ ಪೋಗಟ್ ಅವರಿಗೆ ಕಂಚಿನ ಪದಕವನ್ನು ಜಯಿಸಿದ್ದರು.