Job Description: * ಕರ್ನಾಟಕ ತಂಡದ ವೇಗದ ಬೌಲರ್, 'ಪೀಣ್ಯ ಎಕ್ಸ್ಪ್ರೆಸ್' ಖ್ಯಾತಿಯ ಅಭಿಮನ್ಯು ಮಿಥುನ್ ಪ್ರಥಮ ದರ್ಜೆ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. * 2013-14, 2014-15 ನೇ ಸಾಲಿನ ದೇಶೀಯ ಕ್ರಿಕೆಟ್ನಲ್ಲಿ ಡಬಲ್ ಹ್ಯಾಟ್ರಿಕ್ ಪ್ರಶಸ್ತಿ ರಣಜಿ, ಇರಾನಿ, ವಿಜಯ ಹಜಾರೆ ಪ್ರಶಸ್ತಿಗಳನ್ನೂ ಜಯಿಸಿರುವ ಕರ್ನಾಟಕ ತಂಡದ ಸದಸ್ಯರಾಗಿದ್ದರು. * ಅಭಿಮನ್ಯು ಮಿಥುನ್ ಅವರು 'ಪೀಣ್ಯ ಎಕ್ಸ್ಪ್ರೆಸ್' ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದರು, ಅಷ್ಟೇ ಅಲ್ಲದೇ ಇವರು ಸುಮಾರು 12 ವರ್ಷಗಳಿಂದ ಕರ್ನಾಟಕ ರಾಜ್ಯ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ತಂಡವನ್ನು ಮುನ್ನಡೆಸಿದ್ದರು. * ಭಾರತ ತಂಡದ ಪರವಾಗಿ 2010-11 ನೇ ಸಾಲಿನಲ್ಲಿ 4 ಟೆಸ್ಟ್, 5 ಏಕದಿನ ಪಂದ್ಯಗಳಲ್ಲಿ ಆಟವಾಡಿದ್ದರು, ಹಾಗೂ 103 ಪ್ರಥಮ ದರ್ಜೆ ಪಂದ್ಯಗಳಿಂದ 338 ವಿಕೆಟ್ ಪಡೆದುಕೊಂಡಿದ್ದಾರೆ, ಮತ್ತು 96 ಲಿಸ್ಟ್ ಎ ಪಂದ್ಯ ಹಾಗೂ 74 ಟಿ20 ಪಂದ್ಯಗಳಿಂದ ಕ್ರಮವಾಗಿ 136 ಹಾಗೂ 69 ವಿಕೆಟ್ ಪಡೆದುಕೊಂಡಿದ್ದಾರೆ.