Job Description: * ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್. 11 ರಂದು 'ಭಾರತೀಯ ಬಾಹ್ಯಾಕಾಶ ಸಂಸ್ಥೆ'(ISPA) ಯನ್ನು ಡಿಜಿಟಲ್ ಆಗಿ ಪ್ರಾಂಭಿಸಲಿದ್ದಾರೆ. * ಭಾರತೀಯ ಬಾಹ್ಯಾಕಾಶ ಸಂಘವು ಇದೊಂದು ಬಾಹ್ಯಾಕಾಶ ಹಾಗೂ ಉಪಗ್ರಹ ಕಂಪನಿಗಳ ಪ್ರಮುಖ ಉದ್ಯಮ ಸಂಘವಾಗಿದೆ. * ಭಾರತೀಯ ಬಾಹ್ಯಾಕಾಶ ಸಂಘ ಸ್ಥಾಪಕ ಸದಸ್ಯರಲ್ಲಿ ಟಾಟಾ ಸಮೂಹದ ನೆಲ್ಕೊ, ಭಾರತಿ ಏರ್ಟೆಲ್, ಲಾರ್ಸೆನ್ ಮತ್ತು ಟೂಬ್ರೊ, ಮ್ಯಾಪ್ಮಿಂಡಿಯಾ, ಒನ್ವೆಬ್, ವಾಲ್ಚಂದನಗರ್ ಇಂಡಸ್ಟ್ರೀಸ್ ಹಾಗೂ ಅನಂತ್ ಟೆಕ್ನಾಲಜಿ ಲಿಮಿಟೆಡ್ ಸೇರಿಕೊಂಡಿವೆ. * ಅಷ್ಟೇ ಅಲ್ಲದೇ ಬಿಇಎಲ್, ಗೋದ್ರೆಜ್, ಹ್ಯೂಸ್ ಇಂಡಿಯಾ, ಸೆಂಟಮ್ ಎಲೆಕ್ಟ್ರಾನಿಕ್ಸ್, ಅಜಿಸ್ಟಾ-ಬಿಎಸ್ಟಿ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮ್ಯಾಕ್ಸರ್ ಇಂಡಿಯಾ ಇವುಗಳು ಕೋರ್ ಸದಸ್ಯರ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. * ಪ್ರಸ್ತುತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಭಾರತದ ಬಾಹ್ಯಾಕಾಶ ಉದ್ಯಮವನ್ನು ಮುನ್ನಡೆಸುತ್ತಿದೆ, ಈ ಬಾಹ್ಯಾಕಾಶ ಉದ್ಯಮವು 500 ಕ್ಕೂ ಅಧಿಕ ಖಾಸಗಿಯ ವಿವಿಧ ಸಂಸ್ಥೆಗಳನ್ನು ಒಳಗೊಂಡಿದೆ.