Job Description: * ಭಾರತೀಯ ವಾಯುಪಡೆಯು ಅಕ್ಟೋಬರ್ 8 ರಂದು ತನ್ನ 89 ನೇ ಸಂಸ್ಥಾಪನಾ ದಿನವನ್ನು ಆಚರಿಸಿತ್ತು. * ಪ್ರಸ್ತುತ ಗಾಜಿಯಾಬಾದ್ನ ಹಿಂಡನ್ ವಾಯುನೆಲೆಯಲ್ಲಿ ವಾಯುಪಡೆಯ ದಿನದ ಅಂಗವಾಗಿ ವಾಯುಪಡೆ ಮೆರವಣಿಗೆ ನಡೆಸಿತು, ಈ ಸಭೆಯಲ್ಲಿ ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ, ಹಾಗೂ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಪಾಲ್ಗೊಂಡಿದ್ದರು. * ಪ್ರಸ್ತುತ 1971 ರ ಯುದ್ಧದ ವಿಜಯದ ನೆನಪಿಗಾಗಿ ಈ ದಿನವನ್ನು 'ಸ್ವರ್ಣಿಮ್ ವಿಜಯ್ ವರ್ಷ್' ಎಂದು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಭಾರತೀಯ ವಾಯುಪಡೆ (IAF)ಯು 1932 ರ ಅಕ್ಟೋಬರ್. 8 ರಂದು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸಹಾಯಕ ವಾಯುಪಡೆಯಾಗಿ ರಚನೆಯಾಗಿದೆ. * ಇದೀಗ ವಿಶ್ವ ವಾಯುಪಡೆಗಳಲ್ಲಿ ಭಾರತೀಯ ವಾಯುಪಡೆ 4ನೇ ಸ್ಥಾನದಲ್ಲಿದೆ, ಹಾಗೂ ಇದು ಸಶಸ್ತ್ರ ಸಂಘರ್ಷದ ಸಮಯದಲ್ಲಿ ವೈಮಾನಿಕ ಯುದ್ಧವನ್ನು ನಡೆಸುತ್ತದೆ. * ಈಗಿನ ಭಾರತೀಯ ವಾಯುಪಡೆಗೆ ಈ ಮೊದಲು ಭಾರತವು 1947 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ 'ರಾಯಲ್ ಇಂಡಿಯನ್ ಏರ್ ಫೋರ್ಸ್' ಎಂಬ ಹೆಸರನ್ನು ಇಡಲಾಗಿತ್ತು, ನಂತರ 1950 ರಲ್ಲಿ ಸರ್ಕಾರವು ರಿಪಬ್ಲಿಕ್ ಆಗಿ ಪರಿವರ್ತನೆಗೊಂಡ ನಂತರ ರಾಯಲ್ ಪೂರ್ವಪ್ರತ್ಯ ಎಂಬ ಹೆಸರನ್ನು ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದೆ.