Job Description: * ಉತ್ತರ ಪ್ರದೇಶ ರಾಜ್ಯದಲ್ಲಿ ಇತ್ತೀಚೆಗೆ ನಡೆದ 'ಲಖಿಂಪುರ್ ಖೇರಿ ಘಟನೆ'ಯ ತನಿಖೆಗಾಗಿ ಉತ್ತರ ಪ್ರದೇಶ ರಾಜ್ಯ ಸರ್ಕಾರವು ಏಕ ಸದಸ್ಯ ಆಯೋಗವನ್ನು ರಚಿಸಿದೆ. * ಉತ್ತರ ಪ್ರದೇಶದ ಈ ಲಖಿಂಪುರ್ ಖೇರಿ ಘಟನೆಯಲ್ಲಿ ಎಂಟು ಜನರು ಮೃತಪಟ್ಟಿದ್ದಾರೆ, ಈ ದುರ್ಘಟನೆಯ ತನಿಖೆಗಾಗಿ ನ್ಯಾಯಾಂಗ ಆಯೋಗಕ್ಕೆ ಎರಡು ತಿಂಗಳ ಕಾಲಾವಕಾಶವನ್ನು ನೀಡಿದೆ. * ಉತ್ತರ ಪ್ರದೇಶದ ರಾಜ್ಯಪಾಲರು ವಿಚಾರಣಾ ಆಯೋಗಗಳ ಕಾಯ್ದೆ ಅಡಿಯಲ್ಲಿ 1952 ರ ಸೆಕ್ಷನ್ 3 ರ ಪ್ರಕಾರ ನ್ಯಾಯಾಂಗ ಆಯೋಗವನ್ನು ರಚಿಸಿದ್ದಾರೆ. * ಪ್ರಸ್ತುತ ನ್ಯಾಯಮೂರ್ತಿ ಹೈಕೋರ್ಟ್, ಅಲಹಾಬಾದ್ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರ ನೇತೃತ್ವದಲ್ಲಿ ಈ ಏಕ ಸದಸ್ಯ ಆಯೋಗವಿದೆ. * ಈ ಲಖಿಂಪುರ್ ಖೇರಿ ದುರ್ಘಟನೆಯು ಇದೇ ಅಕ್ಟೋಬರ್ 3 ರಂದು ನಡೆದಿದೆ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರನ್ನು ಸ್ವಾಗತಿಸುವ ಸಂಧರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಚಾಲನೆ ಮಾಡುತ್ತಿರುವ ವಾಹನಗಳಿಂದ ಈ ಘಟನೆಯು ನಡೆದಿದೆ ಎಂದು ತಿಳಿದು ಬಂದಿದೆ.