Job Description: * ವಿಶ್ವ ಸಂಸ್ಥೆಯು ವಿಶ್ವದಾದ್ಯಂತ ಅಕ್ಟೋಬರ್. 7 ರಂದು ವಿಶ್ವ ಹತ್ತಿ ದಿನವನ್ನು ಆಚರಣೆ ಮಾಡಲಾಗುತ್ತದೆ, ಹಾಗೂ ಜನಗಳಲ್ಲಿ ಹತ್ತಿ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸಲು ಈ ದಿವನ್ನು ಆಚರಿಸಲಾಗುತ್ತದೆ. * 2021 ರ ವಿಶ್ವ ಹತ್ತಿ ದಿನವನ್ನು 'ಒಳ್ಳೆಯದಕ್ಕಾಗಿ ಹತ್ತಿ' ಎಂಬ ಧ್ಯೆಯೇ ವ್ಯಾಕ್ಯದಡಿಯಲ್ಲಿ ಆಚರಿಸಲಾಯಿತು. * ಹತ್ತಿಯು ಋಣಾತ್ಮಕ (negative) ಇಂಗಾಲದ ಹೆಜ್ಜೆಗುರುತನ್ನು ಹೊಂದಿದೆ, ಹಾಗೂ ಪರಿಸರವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ ಎಂದು ತಜ್ಞರ ಮಾಹಿತಿ ನೀಡಿದ್ದಾರೆ. * ಪ್ರಸ್ತುತ ಈ 'ವಿಶ್ವ ಹತ್ತಿ ದಿನ'ವನ್ನು 2019 ರಲ್ಲಿ ವಿಶ್ವ ವಾಣಿಜ್ಯ ಸಂಸ್ಥೆಯು '4' ಹತ್ತಿ ಉತ್ಪಾದಿಸುವ ಆಫ್ರಿಕನ್ ರಾಜ್ಯಗಳಾಗಿರುವ ಬೆನಿನ್, ಚಾಡ್, ಬುರ್ಕಿನಾ ಫಾಸೊ, ಹಾಗೂ ಮಾಲಿಗಳ ಉಪಕ್ರಮದಲ್ಲಿ ಪ್ರಾರಂಭಿಸಲಾಗಿದೆ. * ಹತ್ತಿಯು ಆಹಾರ ಮತ್ತು ಫೈಬರ್ ಎರಡನ್ನೂ ಸಮರ್ಪಕವಾಗಿ ನೀಡುವ ಏಕೈಕ ಕೃಷಿ ಬೆಳೆಯಾಗಿದೆ. * ಪ್ರಸ್ತುತ ಹತ್ತಿಯನ್ನು 5 ಖಂಡಗಳ 75 ದೇಶಗಳಲ್ಲಿ ಬೆಳೆಯಲಾಗುತ್ತದೆ, ಹಾಗೂ ಅಂತಾರಾಷ್ಟ್ರೀಯ ಹತ್ತಿ ಸಲಹಾ ಸಮಿತಿಯ ನೀಡಿರುವ ಮಾಹಿತಿಯ ಪ್ರಕಾರ ಒಟ್ಟಾರೆ ಹತ್ತಿಯಿಂದ ವಾರ್ಷಿಕವಾಗಿ ಅಂದಾಜು 41.2 ಬಿಲಿಯನ್ ಡಾಲರ್ ಆದಾಯವಾಗಲಿದೆ, ಅದರಲ್ಲಿ ವರ್ಷಕ್ಕೆ 18 ಬಿಲಿಯನ್ ಡಾಲರ್ ಹತ್ತಿ ವ್ಯಾಪಾರದಾಗಿದೆ.