Job Description: * ಪ್ರಸ್ತುತ ಚುನಾವಣೆ ರಾಜ್ಯಗಳ ಸಮೀಕ್ಷಾ ವರದಿ ಪ್ರಕಾರ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಜೀ ಅವರೇ ಸೂಕ್ತ ಎಂದು ತಿಳಿದು ಬಂದಿದೆ. * ಈ ಸಮೀಕ್ಷೆಯನ್ನು ಎಬಿಪಿ- ಸಿವೋಟರ್-ಐಎಎನ್ಎಸ್ ನಡೆಸಿವೆ, ಪ್ರಧಾನಿ ಹುದ್ದೆಗೆ ಮೋದಿ ಜೀ ಅವರೇ ಸೂಕ್ತ ಎಂದು ಅತೀ ಹೆಚ್ಚಿನ ಜನರು ಅಭಿಪ್ರಾಯಪಟ್ಟಿದ್ದಾರೆ. * ಪ್ರಸ್ತುತ ಈ ಸಮೀಕ್ಷೆಯನ್ನು ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಮಣಿಪುರ, ಗೋವಾ ಹಾಗೂ ಉತ್ತರಾಖಂಡಗಳಲ್ಲಿ ನಡೆಸಲಾಗಿದೆ. * ಸಮೀಕ್ಷೆಯ ನೀಡಿರುವ ಮಾಹಿತಿಯ ಪ್ರಕಾರ ಶೇ 43.1ರಷ್ಟು ಜನರು ದೇಶವನ್ನು ಮುನ್ನಡೆಸಲು ಮೋದಿಯೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೇವಲ ಶೇ. 9.1ರಷ್ಟು ಜನರು ರಾಹುಲ್ ಗಾಂಧಿ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಶೇ. 5.2ರಷ್ಟು ಜನರು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮತ್ತು ಶೇ. 3.2ರಷ್ಟು ಜನರು ಯೋಗಿ ಆದಿತ್ಯನಾಥ್ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. * ಈ ಸಮೀಕ್ಷೆಯನ್ನು ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ 5 ರಾಜ್ಯಗಳ 690 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲಾಗಿತ್ತು, ಸರಿ ಸುಮಾರು 98,121 ಜನರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು.