Job Description: * ಟಾಟಾ ಸನ್ಸ್ ಈ ಹಿಂದೆ ಅಂದರೆ 90 ವರ್ಷಗಳ ಹಿಂದೆ ಪ್ರಾರಂಭಿಸಿದ ವಿಮಾನಯಾನ ಕಂಪನಿಯನ್ನು ಟಾಟಾ ಸನ್ಸ್ ಮರಳಿ ತನ್ನ ಅಧೀನಕ್ಕೆ ಪಡೆದುಕೊಂಡಿದೆ. * ಪ್ರಸ್ತುತ ಭಾರತೀಯ ಕೇಂದ್ರ ಸರ್ಕಾರವು ಏರ್ ಇಂಡಿಯಾ ಖರೀದಿಗೆ ಟಾಟಾ ಸನ್ಸ್ ಸಲ್ಲಿಸಿರುವ 18 ಸಾವಿರ ಕೋಟಿ ರೂ. ಮೌಲ್ಯದ ಬಿಡ್'ಗೆ ಒಪ್ಪಿಗೆ ನೀಡಿದೆ, ಇದೀಗ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಶೇ. 100ರಷ್ಟು ಷೇರುಗಳನ್ನು ಟಾಟಾ ಸನ್ಸ್ ನೀಡಿದೆ. * ಇದೀಗ ಟಾಟಾ ಸಮೂಹವು ಸುಮಾರು 2,700 ಕೋಟಿ ರೂ. ಹಣವನ್ನು ಸಂದಾಯ ಮಾಡಿ, ಇನ್ನು 15,300 ಕೋಟಿ ರೂ. ಮೌಲ್ಯದ ಸಾಲವನ್ನು ವಹಿಸಿಕೊಂಡಿದೆ, ಈ ಮಾಹಿತಿಯನ್ನು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಅವರು ನೀಡಿದ್ದಾರೆ. * ಈ ಏರ್ ಇಂಡಿಯಾ ಕಂಪನಿಯು ಟಾಟಾ ಸಮೂಹದ ಪಾಲಿಗೆ ಸೇರ್ಪಡೆಯಾಗಿರುವ 3 ನೇ ವಿಮಾನ ಕಂಪನಿಯಾಗಿದೆ. * ಪ್ರಸ್ತುತ ಸರ್ಕಾರಿ ಸ್ವಾಮ್ಯದ 'ಏರ್ ಇಂಡಿಯಾ'ದ ಬಿಡ್ಡಿಂಗ್ ಷರತ್ತುಗಳು, ಏರ್ ಇಂಡಿಯಾದಲ್ಲಿ ಇದೀಗ ಕಾರ್ಯ ನಿರ್ವಹಿಸುತ್ತಿರುವ 12,082 ಉದ್ಯೋಗಿಗಳನ್ನು ಒಂದು ವರ್ಷದ ಅವಧಿಗೆ ತಗೆದುಹಾಕುವಂತಿಲ್ಲ, ನಂತರ ಈ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ ಘೋಷಣೆ ಮಾಡಬಹುದಾಗಿದೆ, ಅಷ್ಟೇ ಅಲ್ಲದೇ ಟಾಟಾ 5 ವರ್ಷಗಳವರೆಗೆ ಏರ್ ಇಂಡಿಯಾ ಬ್ರ್ಯಾಂಡ್ ಹಾಗೂ ಲಾಂಛನವನ್ನು ಬೇರೆ ಯಾವುದೇ ಕಂಪನಿಗೆ ವರ್ಗಾವಣೆ ಅಧಿಕಾರವಿರುವದಿಲ್ಲ ಒಂದು ವೇಳೆ ಬ್ರ್ಯಾಂಡ್ ಮತ್ತು ಲಾಂಛನವನ್ನು ಮಾರಾಟ ಮಾಡುವದಾದರೆ ಭಾರತೀಯ ಕಂಪನಿಗೆ ಮಾತ್ರ ಮಾರಾಟ ಮಾಡಬಹುದು ಎಂದು ಸರ್ಕಾರ ತಿಳಿಸಿದೆ.