Job Description: * ಪ್ರಸ್ತುತ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಚೀನಾದಲ್ಲಿ ತಯಾರಿಸಿರುವ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡದಂತೆ ಟೆಸ್ಲಾ ಕಂಪೆನಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ. * ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು 2021 ರ ಇಂಡಿಯಾ ಟುಡೇ ಕಾನ್ಕ್ಲೇವ್ ನಲ್ಲಿ ಈ ವಿಷಯದ ಬಗ್ಗೆ ಮಾತನಾಡಿದರು, ಇದೀಗ ಭಾರತದಲ್ಲಿಯೇ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನ ತಯಾರಿಸಿ ಮಾರಾಟ ಮಾಡಿ ಹಾಗೂ ಭಾರತದಿಂದ ರಫ್ತು ಮಾಡಿ, ಅದಕ್ಕೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನಾವು ನೀಡುತ್ತೇವೆ ಎಂದು ಟೆಸ್ಲಾ ಕಂಪನಿಗೆ ತಿಳಿಸಿದ್ದಾರೆ. * ಪ್ರಸ್ತುತ 2030 ರ ಅವಧಿಗೆ ಎಲೆಕ್ಟ್ರಿಕ್ ಬೈಕ್ ಹಾಗೂ ಕಾರುಗಳ ಬಳಕೆಯು ಶೇ. 40 ಕ್ಕೆ, ಮತ್ತು ಎಲೆಕ್ಟ್ರಿಕ್ ಬಸ್ಗಳ ಬಳಕೆಯು ಶೇ. 10 ಕ್ಕೆ ಏರಿಕೆಯಾದರೆ ಸುಮಾರು 3.5 ಲಕ್ಷ ಕೋಟಿ ರೂ.ನ 15.6 ಕೋಟಿ ಟನ್ ಕಚ್ಚಾ ತೈಲ ಬಳಕೆ ಕಡಿಮೆಗೊಳಿಸಬಹುದಾಗಿದೆ ಎಂದು ತಿಳಿಸಿದ್ದಾರೆ.