Job Description: * ಪ್ರಸ್ತುತ ಬೌದ್ಧ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಬಳಸಿಕೊಳ್ಳುವ ಉದ್ದೇಶದಿಂದ ಪ್ರವಾಸೋದ್ಯಮ ಸಚಿವಾಲಯವು ಇದೇ ಅಕ್ಟೋಬರ್. 4 ರಿಂದ ಅಕ್ಟೋಬರ್. 8 ರವರೆಗೆ 'ಬೌದ್ಧ ಸರ್ಕ್ಯೂಟ್ ರೈಲು FAM ಪ್ರವಾಸ ಮತ್ತು ಸಮ್ಮೇಳನವನ್ನು ಏರ್ಪಡಿಸಿದೆ. * FAM ಪ್ರವಾಸವು ಮುಖ್ಯವಾಗಿ ಬೌದ್ಧ ತಾಣಗಳ ಭೇಟಿ ಮತ್ತು ಬುದ್ಧ ಗಯಾ ಹಾಗೂ ವಾರಣಾಸಿಯಲ್ಲಿ ಸಮ್ಮೇಳನಗಳನ್ನು ಒಳಗೊಂಡಿರುತ್ತದೆ. * ಪ್ರವಾಸೋದ್ಯಮ ಸಚಿವಾಲಯವು ಪ್ರತಿ ಪರ್ಯಾಯ ವರ್ಷದಲ್ಲಿ ಈ ಬೌದ್ಧ ಸಮಾವೇಶವನ್ನು ಆಯೋಜಿಸುತ್ತದೆ, ಅಷ್ಟೇ ಅಲ್ಲದೇ 2021 ರಲ್ಲಿ ಅಂತರರಾಷ್ಟ್ರೀಯ ಬೌದ್ಧ ಸಮಾವೇಶವನ್ನು ನವೆಂಬರ್. 17 ರಿಂದ 21 ರವರೆಗೆ ನಿಗದಿಪಡಿಸಲಾಗಿದೆ. * ಪ್ರವಾಸೋದ್ಯಮ ಸಚಿವಾಲಯವುವು ಬೌದ್ಧ ತಾಣಗಳಿಗಾಗಿ 'ಇನ್ಕ್ರೆಡಿಬಲ್ ಇಂಡಿಯಾ ವೆಬ್ಸೈಟ್' (www.indiathelandofbuddha.in) ಜಾಲತಾಣವನ್ನು ಸಿದ್ಧಪಡಿಸಿದೆ, ಇದು ಭಾರತದಲ್ಲಿನ ಶ್ರೀಮಂತ ಬೌದ್ಧ ಪರಂಪರೆಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ. * ಸಚಿವಾಲಯವು ಈ ಜಾಲತಾಣವನ್ನು ಜಪಾನೀಸ್, ಥಾಯ್, ಚೈನೀಸ್ ಮತ್ತು ವಿಯೆಟ್ನಾಮೀಸ್, ಭಾಷೆಗಳಲ್ಲಿ ರೂಪಿಸಿದೆ.