Job Description: * ಭಾರತದ 5ನೇ ಆವೃತ್ತಿಯ ಜಪಾನ್ ಕಡಲ ದ್ವಿಪಕ್ಷೀಯ ವ್ಯಾಯಾಮವನ್ನು ಇದೇ ಅಕ್ಟೋಬರ್. 6 ರಿಂದ ಭಾರತೀಯ ನೌಕಾಪಡೆ ಹಾಗೂ ಜಪಾನ್ ಕಡಲ ಸ್ವರಕ್ಷಣಾ ಪಡೆಗಳು ಅರಬ್ಬಿ ಸಮುದ್ರದಲ್ಲಿ ಆರಂಭಿಸಿವೆ. * 2020 ಸೆಪ್ಟೆಂಬರ್ ನಲ್ಲಿ JIMEX ವ್ಯಾಯಾಮದ ಕೊನೆಯ ಆವೃತ್ತಿಯನ್ನು ನಡೆಸಲಾಯಿತು. * ಕಾರ್ಯಾಚರಣೆಯ ವಿಧಿವಿಧಾನಗಳ ತಿಳುವಳಿಕೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ JIMEX-21 ನ್ನು ನಡೆಸಲಾಗುತ್ತದೆ, ಇದನ್ನು ಉಭಯ ದೇಶಗಳ ನೌಕಾಪಡೆಗಳು ಸಿದ್ಧಪಡಿಸಿವೆ. * ಪ್ರಸ್ತುತ 2012 ರ ಜನೇವರಿಯಲ್ಲಿ ಈ JIMEX ಸರಣಿಯ ವ್ಯಾಯಾಮಗಳನ್ನು ಪ್ರಾರಂಭಿಸಲಾಗಿದೆ, ಇದು ಕಡಲ ಭದ್ರತಾ ಸಹಕಾರದ ಮೇಲೆ ಕಣ್ಗಾವಲು ಇಡಲಿದೆ, ಇದನ್ನು ಭಾರತೀಯ ಮತ್ತು ಜಪಾನಿನ ನೌಕಾಪಡೆಗಳ ನಡುವೆ ಪ್ರತಿ '2' ವರ್ಷಗಳೊಗೊಮ್ಮೆ ನಡೆಸಲಾಗುತ್ತದೆ. * ಇದಲ್ಲದೇ ಭಾರತ ಮತ್ತು ಜಪಾನ್ ದೇಶಗಳು ವಾರ್ಷಿಕವಾಗಿ "ಧರ್ಮ ಗಾರ್ಡಿಯನ್" ಎಂಬ ಜಂಟಿ ಭೂ ಸೇನಾ ವ್ಯಾಯಾಮವನ್ನು ನಡೆಸುತ್ತವೆ. * ಪ್ರಸ್ತುತ ಮಲಬಾರ್ ಎಂಬ ತ್ರಿಪಕ್ಷೀಯ ಕಡಲ ವ್ಯಾಯಾಮದಲ್ಲಿ ಭಾರತ ಮತ್ತು ಜಪಾನ್ ಯುಎಸ್ಎ ತೊಡಗಿಕೊಂಡಿವೆ.