Job Description: * ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಅತ್ಯಾಧುನಿಕ ಹೆಲಿ-ಬೋರ್ನ್ ಸರ್ವೇ ತಂತ್ರಜ್ಞಾನವನ್ನು ಆರಂಭಿಸಿದರು. * ಈ ಹೆಲಿ-ಬೋರ್ನ್ ಸರ್ವೇ ತಂತ್ರಜ್ಞಾನವನ್ನು ಅಂತರ್ಜಲ ನಿರ್ವಹಣೆಗಾಗಿ ಪ್ರಾರಂಭಿಸಲಾಗಿದೆ. * ಈ ಸರ್ವೇ ತಂತ್ರಜ್ಞಾನವನ್ನು ಮೊದಲನೇ ಹಂತದಲ್ಲಿ ರಾಜಸ್ಥಾನ, ಪಂಜಾಬ್, ಗುಜರಾತ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ಆರಂಭಿಸಲಾಗಿದೆ. * ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಇದೇ ಅಕ್ಟೋಬರ್. 5 ರಂದು ರಾಜಸ್ಥಾನದ ಜೋಧಪುರದಿಂದ ಸಮೀಕ್ಷೆಯನ್ನು ಪ್ರಾರಂಭಿಸಿದ್ದಾರೆ. * ಈ ತಂತ್ರಜ್ಞಾನವನ್ನು CSIR-NGRI ಹೈದರಾಬಾದ್ ಸಿದ್ಧಪಡಿಸಿದೆ, ಈ ತಂತ್ರಜ್ಞಾನವನ್ನು ಶುಷ್ಕ ಪ್ರದೇಶಗಳಲ್ಲಿನ ಅಂತರ್ಜಲ ಮೂಲಗಳನ್ನು ನಕ್ಷೆ ಪತ್ತೆ ಮಾಡಲು ಬಳಕೆ ಮಾಡಲಾಗುತ್ತದೆ, ಹಾಗೂ ಈ ತಂತ್ರಜ್ಞಾನವು ನೆಲದ ಮಟ್ಟಕ್ಕಿಂತ 500 ಮೀ. ಆಳದವರೆಗೆ 3D ಚಿತ್ರವನ್ನು ನೀಡುತ್ತದೆ. * ಪ್ರಸ್ತುತ ಈ ತಂತ್ರಜ್ಞಾನವನ್ನು ಕುಡಿಯುವ ಉದ್ದೇಶಕ್ಕಾಗಿ ಅಂತರ್ಜಲವನ್ನು ಬಳಸಿಕೊಳ್ಳಲು ಸಹಾಯ ಮಾಡಲಿದೆ. * ಪ್ರಸ್ತುತ ಹೆಲಿ-ಬೋರ್ನ್ ಸರ್ವೇ ತಂತ್ರಜ್ಞಾನದಿಂದ ಮುಖ್ಯವಾಗಿ ವಾಯುವ್ಯ ಭಾರತದ ಶುಷ್ಕ ಪ್ರದೇಶಗಳು ರಾಜಸ್ಥಾನ, ಹರಿಯಾಣ, ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ಅಂದಾಜು 8 ಕೋಟಿ ಜನರಿಗೆ ಇದರ ಉಪಯೋಗವಾಗಲಿದೆ ಎಂದು ತಿಳಿಸಿದ್ದಾರೆ.