Job Description: * ಪ್ರಸ್ತುತ 'ಎಲೆಕ್ಟ್ರಾನಿಕ್ ಪಿಂಚಣಿ ಪಾವತಿ ಆದೇಶ'ವನ್ನು ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸೈನಿಕರ ಕಲ್ಯಾಣ ಇಲಾಖೆಯು ಡಿಜಿ ಲಾಕರ್ನೊಂದಿಗೆ ಸಂಯೋಜಿಸಿದೆ. * ಈ ಎಲೆಕ್ಟ್ರಾನಿಕ್ ಪಿಂಚಣಿ ಪಾವತಿ ಆದೇಶವನ್ನು ಅಲಹಾಬಾದ್ನ ಪ್ರಿನ್ಸಿಪಾಲ್ ಕಂಟ್ರೋಲರ್ ಆಫ್ ಡಿಫೆನ್ಸ್ ಅಕೌಂಟ್ಸ್ ಪಿಂಚಣಿ ಉತ್ಪಾದಿಸುತ್ತದೆ, ಹಾಗೂ EPPO ವನ್ನು ಡಿಜಿ ಲಾಕರ್ನೊಂದಿಗೆ ಸಂಯೋಜನೆ ಮಾಡಲಾಗಿದೆ ಇದರಿಂದಾಗಿ ರಕ್ಷಣಾ ಪಿಂಚಣಿದಾರರ ಜೀವನವನ್ನು ಸುಲಭಗೊಳಿಸಲು ಸಾಧ್ಯವಾಗಲಿದೆ. * ಈ ಪಿಂಚಣಿ ಪಾವತಿ ಆದೇಶದಿಂದಾಗಿ ಎಲ್ಲಾ ಡಿಫೆನ್ಸ್ ಪಿಂಚಣಿದಾರರಿಗೆ ಡಿಜಿ ಲಾಕರ್ನಿಂದ ತಕ್ಷಣವೇ ಪಿಂಚಣಿ ಪಾವತಿ ಪ್ರತಿಯನ್ನು ಪಡೆಯಬಹುದಾಗಿದೆ, ಇದು ಪಿಂಚಣಿ ಪಾವತಿ ಆದೇಶದ ಶಾಶ್ವತ ದಾಖಲೆಯನ್ನು ಲಾಕರ್ನಲ್ಲಿ ಸೃಷ್ಟಿಸುತ್ತದೆ. * ಪ್ರಸ್ತುತ ಡಿಜಿ ಲಾಕರ್ ಪ್ಲಾಟ್ಫಾರ್ಮ್ ಬಳಸಿಕೊಂಡು 23 ಲಕ್ಷಕ್ಕೂ ಅಧಿಕ ರಕ್ಷಣಾ ಪಿಂಚಣಿದಾರರ ಎಲೆಕ್ಟ್ರಾನಿಕ್ ಪಿಂಚಣಿ ಪಾವತಿ ಆದೇಶಗಳ ಮಾಹಿತಿಯನ್ನು ನೀಡಲಿದೆ ಎಂದಿದ್ದಾರೆ. * ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಡಿಜಿ ಲಾಕರ್ ಸೇವೆಯನ್ನು ನೀಡಲಿದೆ ಇದೊಂದು ಭಾರತೀಯ ಡಿಜಿಟಲೀಕರಣ ಆನ್ಲೈನ್ ಸೇವೆಯಾಗಿದೆ ಎಂದು ತಿಳಿಸಿದ್ದಾರೆ. * ಈ ಡಿಜಿ ಲಾಕರ್ ಪ್ರತಿ ಖಾತೆಗೆ 1GB ಸಂಗ್ರಹ ಸ್ಥಳವನ್ನು ನೀಡಲಿದೆ, ಇದನ್ನು ಎಲ್ಲಾ ದಾಖಲೆಗಳ ಸ್ಕ್ಯಾನ್ ಮಾಡಿದ ನಕಲು ಪ್ರತಿಗಳನ್ನು ಅಪ್ಲೋಡ್ ಮಾಡಲು ಬಳಸಬಹುದಾಗಿದೆ.