Job Description: * 'ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನ ವಾರ'ವನ್ನು ಅಕ್ಟೋಬರ್. 5 ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಚರಣೆ ಮಾಡುತ್ತದೆ. * ಅಷ್ಟೇ ಅಲ್ಲದೇ ಅಕ್ಟೋಬರ್.10 ನ್ನು 'ವಿಶ್ವ ಮಾನಸಿಕ ಆರೋಗ್ಯ ದಿನ' ಎಂದು ಆಚರಿಸುತ್ತಾರೆ. * ಪ್ರಸ್ತುತ ಮಾನಸಿಕ ಅಸ್ವಸ್ಥತೆಕ್ಕೆ ಸಂಬಂಧಿಸಿದ ಕಳಂಕವನ್ನು ಜನರಲ್ಲಿ ತಗೆದುಹಾಕುವ ಉದ್ದೇಶದಿಂದ ಭಾರತದಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನ ವಾರವನ್ನು ಆಚರಿಸಲಾಗುತ್ತಿದೆ. * ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. * ಮಾನಸಿಕ ಆರೋಗ್ಯಕ್ಕಾಗಿ ವಿಶ್ವ ಒಕ್ಕೂಟದ ಉಪಕ್ರಮವಾಗಿ ಮೊದಲ ವಿಶ್ವ ಮಾನಸಿಕ ಆರೋಗ್ಯ ದಿನವನ್ನು 1992 ರಲ್ಲಿ ಆಚರಣೆ ಮಾಡಲಾಯಿತು.