Job Description: * ಭಾರತೀಯ ಮೂಲದ ಪೊಲೀಸ್ ಅಧಿಕಾರಿಯು ಅಮೇರಿಕಾದಲ್ಲಿ ಸೇವೆಯಲ್ಲಿದ್ದಾಗ ದುಷ್ಕರ್ಮಿಗಳ ಗುಂಡಿಗೆ ಪ್ರಾಣವನ್ನು ತ್ಯಜಿಸಿದ್ದಾರೆ, ಈ ಕಾರಣದಿಂದ ಇಂಡೋ-ಅಮೆರಿಕನ್ ಪೊಲೀಸ್ ಅಧಿಕಾರಿ ಹೆಸರನ್ನು ಅಲ್ಲಿನ ಅಂಚೆ ಕಚೇರಿಗೆ ಮರುನಾಮಕರಣ ಮಾಡಿ ಪೊಲೀಸ್ ಅಧಿಕಾರಿ ಗೌರವವನ್ನು ತಿಳಿಸಿದ್ದಾರೆ. * ಅಧಿಕೃತವಾಗಿ ದಿವಂಗತ ಪೊಲೀಸ್ ಅಧಿಕಾರಿ ಡೆಪ್ಯೂಟಿ ಸಂದೀಪ್ ಸಿಂಗ್ ಧಲಿವಾಲ್ ಹೆಸರುನ್ನು ಅಮೇರಿಕದ ಟೆಕ್ಸಾಸ್ನ ಹೂಸ್ಟನ್ನಲ್ಲಿರುವ 315 ಅಡಿಕ್ಸ್ ಹೊವೆಲ್ ರಸ್ತೆಯ ಅಂಚೆ ಕಚೇರಿಗೆ ಮರುನಾಮಕರಣ ಮಾಡಿದ್ದಾರೆ. * 2019 ರ ಸೆಪ್ಟೆಂಬರ್. 27 ರಂದು ಡೆಪ್ಯೂಟಿ ಸಂದೀಪ್ ಸಿಂಗ್ ಧಲಿವಾಲ್ ಅವರು ಟೆಕ್ಸಾಸ್ನ ಹ್ಯಾರಿಸ್ ಕೌಂಟಿಯಲ್ಲಿ ಟ್ರಾಫಿಕ್ ಪೊಲೀಸ್ ಆಗಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದರು. * ಪ್ರಸ್ತುತ ಈ ದಿವಂಗತ ಪೊಲೀಸ್ ಅಧಿಕಾರಿಯ ಸೇವೆ, ತ್ಯಾಗ ಹಾಗೂ ಅವರ ಉದಾಹರಣೆಯ ಶಾಶ್ವತವಾಗಿ ನೆನಪಿನಲ್ಲಿಡಲು ಬಯಸುತ್ತೇವೆ ಎಂದು ಅಲ್ಲಿನ ಕಾಂಗ್ರೆಸ್ ಸದಸ್ಯೆ ಲಿಜಿ ಫ್ಲೆಚರ್ ಮಾಹಿತಿ ನೀಡಿದ್ದಾರೆ.