Job Description: * ಪ್ರಸ್ತುತ ಇಂಡೋನೇಷ್ಯಾ ಜೆಟ್ ಇಂಧನಕ್ಕೆ ಸ್ವಲ್ಪ ಪ್ರಮಾಣದಲ್ಲಿ ತಾಳೆ ಎಣ್ಣೆಯನ್ನು ಮಿಶ್ರಮಾಡಿ ವಿಮಾನ ಹಾರಾಟ ನಡೆಸುವ ಪ್ರಥಮ ಪರೀಕ್ಷೆ ಯಶಸ್ವಿಗೊಳಿಸಿದೆ. * ತಾಳೆ ಎಣ್ಣೆ ಮಿಶ್ರಣಮಾಡಿದ ಜೆಟ್ ಇಂಧನ ಬಳಸಿಕೊಂಡು ವಿಮಾನವು ಇಂಡೋನೇಷ್ಯಾದ ರಾಜಧಾನಿ ಜಕಾರ್ತದಿಂದ 100 ಕಿ.ಮೀ.ದೂರದ ಬಾಂಡುಂಗ್ ನಗರಕ್ಕೆ ಯಶಸ್ವಿಯಾಗಿ ಪ್ರಯಾಣ ಬೆಳೆಸಿದೆ ಎಂದು ಅಲ್ಲಿನ ಹಣಕಾಸು ಸಚಿವ ಐರ್ಲಾಂಗ್ ಹರ್ತಾರೊತೊ ಅವರು ತಿಳಿಸಿದ್ದಾರೆ. * ಇಂಡೋನೇಷ್ಯಾ ರಾಷ್ಟ್ರವು ಇದೀಗ ಜೈವಿಕ ಇಂಧನ ಬಳಕೆಯನ್ನು ಕಡ್ಡಾಯಗೊಳಿಸುತ್ತಿದೆ, ಅಷ್ಟೇ ಅಲ್ಲದೇ ಈಗಿನ ಇಂಧನದೊಂದಿಗೆ ಶೇ 30ರಷ್ಟು ತಾಳೆ ಎಣ್ಣೆ ಬಳಸುವುದನ್ನು ಕಡ್ಡಾಯಗೊಳಿಸಿದೆ, ಈ ಮಿಶ್ರಣಕ್ಕೆ 'ಬಿ30' ಎನ್ನುವರು. * ಇಂಡೋನೇಷ್ಯಾದ ಈ ಪರೀಕ್ಷೆಯಲ್ಲಿ ಜೈವಿಕ ಜೆಟ್ ಇಂಧನದಲ್ಲಿ ಶೇ 2.4 ರಷ್ಟು ತಾಳೆ ಎಣ್ಣೆ ಅಂಶವನ್ನು ಮಿಶ್ರಣ ಮಾಡಲಾಗಿದೆ, ಅಷ್ಟೇ ಅಲ್ಲದೇ 2025 ರ ವೇಳೆಗೆ ಮಿಶ್ರಣದ ಪ್ರಮಾಣವನ್ನು ಶೇ. 5 ರವರೆಗೆ ಕಡ್ಡಾಯವಾಗಿ ಬಳಕೆಮಾಡಬೇಕಿದೆ ಎಂದು ತಿಳಿಸಿದ್ದಾರೆ.