Job Description: * ಕೇಂದ್ರ ಸಚಿವ ಸಂಪುಟವು ಬೃಹತ್ ಜವಳಿ ಪಾರ್ಕ್ ಸ್ಥಾಪನೆ ಮಾಡಲು 4,445 ಕೋಟಿ ರೂ.ಗಳ ಪಿಎಂ ಮಿತ್ರ ಯೋಜನೆಗೆ ಅನುಮೋದನೆ ನೀಡಿದೆ, ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಾಗೂ ಅನುರಾಗ್ ಠಾಕೂರ್ ಅವರು ತಿಳಿಸಿದ್ದಾರೆ. * ದೇಶದಲ್ಲಿ ಈ ಪಿಎಂ ಮಿತ್ರ ಯೋಜನೆ ಅಡಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆಯಿಂದಾಗಿ, ಜವಳಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ, ಅದರೊಂದಿಗೆ ಅದೆಷ್ಟೋ ಜನರಿಗೆ ಉದ್ಯೋಗ ವಾಡಿಗಿಸಿದಂತಾಗುತ್ತದೆ, ಪ್ರಸ್ತುತ ಈ ಜವಳಿ ಕ್ಷೇತ್ರದಲ್ಲಿ 21 ಲಕ್ಷ ಉದ್ಯೋಗಗಳು ಅಂದರೆ 7 ಲಕ್ಷ ನೇರ ಹಾಗೂ 14 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ. * ಈ ಪಿಎಂ ಮಿತ್ರ ಪಾರ್ಕ್ ಯೋಜನೆಗೆ 5 ವರ್ಷಗಳಲ್ಲಿ 4,445 ಕೋಟಿ ಖರ್ಚು ಮಾಡಲಾಗುತ್ತದೆ, ಹಾಗೂ ಈ ಯೋಜನೆ ಅಡಿಯಲ್ಲಿ ನೂಲುವಿಕೆ, ನೇಯ್ಗೆ, ಸಂಸ್ಕರಣೆ, ಬಣ್ಣ, ಹಾಗೂ ಮುದ್ರಣದಿಂದ ಬಟ್ಟೆಗಳ ತಯಾರಿಸುವವರಿಗೆ ಈ ಎಲ್ಲ ಕೆಲಸಗಳು ಒಂದೇ ಸ್ಥಳದಲ್ಲಿ ಸರಾಗವಾಗಿ ನಡೆಯಲಿವೆ, ಇದರಿಂದ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ. * ಈ ಮಿತ್ರ ಪಾರ್ಕ್ ವಿವಿಧ ರಾಜ್ಯಗಳಲ್ಲಿ ಸಾರ್ವಜನಿಕ ಖಾಸಗಿ ಸಹಯೋಗದೊಂದಿಗೆ ನಿರ್ಮಾಣವಾಗಲಿವೆ.