Job Description: * ಪ್ರಸ್ತುತ ಪ್ರಧಾನಿ ಮೋದಿ ಅವರು ಸ್ವಾಮಿತ್ವ ಯೋಜನೆ(SVAMITVA Yojana )ಯನ್ನು ಪ್ರಾರಂಭದಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ್, ರಾಜಸ್ಥಾನ, ಹರಿಯಾಣ, ಪಂಜಾಬ್ ಹಾಗೂ ಕರ್ನಾಟಕ ರಾಜ್ಯಗಳ ಕೆಲವು ಹಳ್ಳಿಗಳಲ್ಲಿ ಆರಂಭಿಸಿದ್ದಾರೆ, ಈ ಯೋಜನೆ ಅಡಿಯಲ್ಲಿ 22 ಲಕ್ಷ ಕುಟುಂಬಗಳಿಗೆ ಆಸ್ತಿ ಕಾರ್ಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. * ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಲ್ ಸಭೆಯ ಮೂಲಕ ಮಧ್ಯಪ್ರದೇಶದಲ್ಲಿನ ಸ್ವಾಮಿತ್ವ ಯೋಜನೆಯ ಫಲಾನುಭವಿಗಳ ಜೊತೆ ಸಂವಾದ ನಡೆಸಿದರು, ಹಾಗೂ ಈ ಯೋಜನೆಯಿಂದಾಗಿ ಬಹಳಷ್ಟು ಜನ ಬ್ಯಾಂಕಿನಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. * ಪ್ರಸ್ತುತ ಆಸ್ತಿ ಮಾಲೀಕತ್ವದ ಸ್ಥಾಪನೆಯ ಯೋಜನೆಯಾಗಿರುವ ಈ ಸ್ವಾಮಿತ್ವ ಯೋಜನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ತರಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. * ಈ ಸ್ವಾಮಿತ್ವ ಯೋಜನೆ ಅಡಿಯಲ್ಲಿನ ಅಸ್ತಿ ಕಾರ್ಡ್ಗಳು ಗ್ರಾಮೀಣ ಅಭಿವೃದ್ಧಿಗೆ ಉತ್ತಮ ವ್ಯವಸ್ಥೆಯನ್ನು ಒದಗಿಸುತ್ತವೆ, ಮತ್ತು ಸಣ್ಣ ಮಟ್ಟದ ರೈತರಿಗೆ ಬೆಳೆಯಲು ಸಹಾಯಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. * ಪ್ರಧಾನಿ ಮೋದಿ ಅವರು ಈ ಯೋಜನೆಯಡಿ 1,71,000 ಫಲಾನುಭವಿಗಳಿಗೆ ಇ-ಪ್ರಾಪರ್ಟಿ ಕಾರ್ಡ್ ಗಳನ್ನು ಹಸ್ತಾಂತರಿಸಿದರು.