Job Description: * ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತನಿಖೆಯಲ್ಲಿ ಪೋಲಿಸ್ ಅಧಿಕಾರಿಗಳಿಗೆ ಸಹಾಯವಾಗಲು ಮುಖ ಗುರುತಿಸುವಿಕೆ ತಂತ್ರಾಂಶವನ್ನು(Software) ಆರಂಭಿಸಿದ್ದಾರೆ. * ಪೊಲೀಸ್ ಸಿಬ್ಬಂದಿಗೆ ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಹಾಗೂ ಸಿಸ್ಟಮ್ಸ್ ನಲ್ಲಿ ಸಂಗ್ರಹಿಸಿರುವ ಮಾಹಿತಿಗಳೊಂದಿಗೆ ಶಂಕಿತರ ಫೋಟೋಗಳನ್ನು ಹೋಲಿಸಲು ಈ ಮುಖ ಗುರುತಿಸುವಿಕೆ ತಂತ್ರಾಂಶ(Face recognition software)ವು ಸಹಾಯಮಾಡಲಿದೆ ಎಂದು ತಿಳಿಸಿದ್ದಾರೆ. * ಈ ವೆಬ್ಸೈಟ್ನಲ್ಲಿ 5.30 ಲಕ್ಷಕ್ಕೂ ಹೆಚ್ಚು ಶಂಕಿತರ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ. * ಈ ಸಾಫ್ಟ್ವೇರ್ ಅನ್ನು ಪೊಲೀಸ್ ಠಾಣೆಗಳಲ್ಲಿ ಕಂಪ್ಯೂಟರ್ಗಳಲ್ಲಿ ಹಾಗೂ ಪೊಲೀಸ್ ಸಿಬ್ಬಂದಿಯ ಸ್ಮಾರ್ಟ್ಫೋನ್ಗಳಲ್ಲಿ ಬಳಕೆಮಾಡಬಹುದಾಗಿದೆ. * ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ಗಳು ಮತ್ತು ಸಿಸ್ಟಮ್ಸ್ (CCTNS) ಎನ್ನುವುದು ಭಾರತೀಯ ಸರ್ಕಾರದ ಯೋಜನೆಯಾಗಿದೆ, ಇ-ಆಡಳಿತದ ಮೂಲಕ ಪರಿಣಾಮಕಾರಿ ಪೋಲಿಸರಿಗಾಗಿ ಸಮಗ್ರ ವ್ಯವಸ್ಥೆಯನ್ನು ರಚಿಸಲು ಇದನ್ನು ಆರಂಭಿಸಲಾಗಿದೆ, ಅಷ್ಟೇ ಅಲ್ಲದೇ ಇದು ರಾಷ್ಟ್ರವ್ಯಾಪಿ ಆನ್ಲೈನ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಹೊಂದಿದೆ, ಹಾಗೂ ಭಾರತದ ಸರಿ ಸುಮಾರು 14,000 ಪೊಲೀಸ್ ಠಾಣೆಗಳನ್ನು ಸಂಪರ್ಕಿಸುತ್ತದೆ.