Job Description: * ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 'ಡೇರ್ ಟು ಡ್ರೀಮ್ 2.0' ಸ್ಪರ್ಧೆಯನ್ನು ವಿಜೇತರನ್ನು ಗೌರವಿಸಿದರು, ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು ಈ 'ಡೇರ್ ಟು ಡ್ರೀಮ್ 2.0' ಸ್ಪರ್ಧೆಯನ್ನು ಆಯೋಜಿಸಿದೆ. * ಈ ಸ್ಪರ್ಧೆಯಲ್ಲಿ ಒಟ್ಟಾರೆ 40 ವಿಜೇತರಿಗೆ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗಿದೆ, ಅಷ್ಟೇ ಅಲ್ಲದೇ 'ಡೇರ್ ಟು ಡ್ರೀಮ್ 3.0 ಕ್ಕೆ ಸ್ಟಾರ್ಟ್ ಅಪ್ಗಳನ್ನು ಉತ್ತೇಜಿಸಲು ವೇದಿಕೆಯನ್ನು ಆರಂಭಿಸಲಾಗಿದೆ. * 2019 ನೇ ಸಾಲಿನ DRDO ಯುವ ವಿಜ್ಞಾನಿಗಳ ಪ್ರಶಸ್ತಿಗಳನ್ನು ಕೇಂದ್ರ ಸಚಿವರು ನೀಡಿದರು. * DRDO ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮೂರು ವ್ಯವಸ್ಥೆಗಳನ್ನು ಸಶಸ್ತ್ರ ಪಡೆಗಳಿಗೆ ನೀಡಲಾಗಿದೆ. * DRDO ಭಾರತೀಯ ವಾಯುಪಡೆಗಾಗಿ, ARINC818 ವಿಡಿಯೋ ಪ್ರೊಸೆಸಿಂಗ್ ಹಾಗೂ ಸ್ವಿಚಿಂಗ್ ಮಾಡ್ಯೂಲ್ ನ್ನು ಅಭಿವೃದ್ಧಿಪಡಿಸಿದೆ. ಸಲಾಗಿದೆ. * DRDO ಭಾರತೀಯ ನೌಕಾಪಡೆಗಾಗಿ, ಸೋನಾರ್ ಪರ್ಫಾರ್ಮೆನ್ಸ್ ಮಾಡೆಲಿಂಗ್ ಸಿಸ್ಟಮ್ ನ್ನು ಅಭಿವೃದ್ಧಿಪಡಿಸಿದೆ, ಇದರಿಂದ ಭಾರತೀಯ ನೌಕಾ ಹಡಗು, ಮತ್ತು ಜಲಾಂತರ್ಗಾಮಿ ನೌಕೆಗಳು ಹಾಗೂ ನೀರಿನ ಕಣ್ಗಾವಲು ಇಡಲು ಉಪಯೋಗವಾಗಲಿದೆ ಎಂದಿದ್ದಾರೆ. * DRDO ಭಾರತೀಯ ಸೇನೆಗಾಗಿ, ಬಂದ್ ಬ್ಲಾಸ್ಟಿಂಗ್ ಸಾಧನ Mk-II ಸಾಧನವನ್ನು ಅಭಿವೃದ್ಧಿಪಡಿಸಿದೆ.