Job Description: * ಈಶಾನ್ಯದ ಕಠಿಣ ಹಾಗೂ ತಲುಪಲು ಕಷ್ಟಕರವಾದ ಭೂಪ್ರದೇಶಗಳಲ್ಲಿ 'ಮೇಡ್ ಇನ್ ಇಂಡಿಯಾ ಡ್ರೋನ್ಸ್' ಬಳಸಿಕೊಂಡು ಕೋವಿಡ್ -19 ಲಸಿಕೆ ವಿತರಣೆಯನ್ನು ಮಾಡಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಉಪಕ್ರಮವನ್ನು ಆರಂಭಿಸಿದ್ದಾರೆ. * ಈ ಕಾರಣದಿಂದಾಗಿ ಐಸಿಎಂಆರ್ 'ಈಶಾನ್ಯದಲ್ಲಿ ಡ್ರೋನ್ ರೆಸ್ಪಾನ್ಸ್ ಮತ್ತು ಔಟ್ರೀಚ್ (ಐ-ಡ್ರೋನ್)' ಎಂಬ ವಿತರಣಾ ಮಾದರಿಯನ್ನು ರಚಿಸಿದೆ. * ಪ್ರಸ್ತುತ ಕೋವಿಡ್ -19 ಲಸಿಕೆಯನ್ನು 15 ಕಿ.ಮೀ. ದೂರ ಸಾಗಿಸಲು ಇದೇ ಮೊದಲ ಬಾರಿ ದಕ್ಷಿಣ ಏಷ್ಯಾದಲ್ಲಿ 'ಮೇಕ್ ಇನ್ ಇಂಡಿಯಾ' ಡ್ರೋನ್'ಗಳನ್ನೂ ಬಳಸಲಾಗಿದೆ. * ಕೋವಿಡ್ -19 ಲಸಿಕೆಯನ್ನು ಬಿಷ್ಣುಪುರ ಜಿಲ್ಲಾ ಆಸ್ಪತ್ರೆಯಿಂದ ಮಣಿಪುರದ ಕರಂಗ್ ದ್ವೀಪದ ಲೋಕ್ತಕ್ ಸರೋವರದವರೆಗೆ ಕೇವಲ 12 ರಿಂದ 15 ನಿಮಿಷಗಳಲ್ಲಿ ಕಳುಹಿಸಲಾಗಿದೆ, ಈ ಎರಡು ಪ್ರದೇಶಗಳ ನಡುವಿನ ದೂರವು 26 ಕಿಮೀ. ಆಗಿದೆ. * ಸದ್ಯ ಮಣಿಪುರ ಮತ್ತು ನಾಗಾಲ್ಯಾಂಡ್ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಸವಾಲುಗಳನ್ನು ಎದುರಿಸಲು ಡ್ರೋನ್ ಆಧಾರಿತ ವಿತರಣಾ ಯೋಜನೆಗಳನ್ನು ನಿಯೋಜಿಸಲಾಗಿದೆ.