Job Description: * ಪ್ರಸ್ತುತ ಕಾಮಧೇನು ದೀಪಾವಳಿ 2021 ಅಭಿಯಾನಕ್ಕೆ ಮಾಜಿ ಕ್ಯಾಬಿನೆಟ್ ಮಂತ್ರಿ ಮತ್ತು ರಾಷ್ಟ್ರೀಯ ಮಾಜಿ ಅಧ್ಯಕ್ಷ ಕಾಮಧೇನು ಆಯೋಗ್ ಚಾಲನೆ ನೀಡಿದರು. * ಈ ಅಭಿಯಾನವು ಹಸುವಿನ ಸಗಣಿಯಿಂದ ಸುಮಾರು 100 ಕೋಟಿ ದೀಪಕ್ ದೀಪಗಳು ಹಾಗೂ ಲಕ್ಷ್ಮಿ-ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಲು ಆರಂಭಿಸಲಾಗಿದೆ, ಅಷ್ಟೇ ಅಲ್ಲದೇ ಹಸುವಿನಿಂದ ಪಂಚಗವ್ಯವನ್ನು ಬಳಸಿಕೊಂಡು ದೀಪಕ್, ಕ್ಯಾಂಡಲ್ಸ್, ಲ್ಯಾಂಪ್ಸ್, ಹವನಸಮಗ್ರಿ, ಸಾಂಬ್ರಾಣಿ ಕಪ್, ಹಾರ್ಡ್ ಬೋರ್ಡ್, ಧೂಪಟ್ಟಿ, ಧೂಪದ್ರವ್ಯಗಳು, ವಾಲ್ ಪೀಸ್, ಲಕ್ಷ್ಮಿ-ಗಣೇಶ್ ಮೂರ್ತಿ ಹೀಗೆ 300 ವಸ್ತುಗಳನ್ನು ಸಿದ್ದ ಪಡಿಸಲಾಗುತ್ತಿದೆ. * ರಾಷ್ಟ್ರೀಯ ಕಾಮಧೇನು ಆಯೋಗವು: ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ, ಹಸುಗಳ ರಕ್ಷಣೆಗಾಗಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ, ಈ ಸಂಸ್ಥೆಯು ರಾಷ್ಟ್ರೀಯ ಗೋಕುಲ್ ಮಿಷನ್ ನ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತದೆ. * ಸರ್ಕಾರವು 2014 ರ ಡಿಸೆಂಬರ್ನಲ್ಲಿ ಸ್ಥಳೀಯ ಗೋವಿನ ತಳಿಗಳನ್ನು ಅಭಿವೃದ್ಧಿಪಡಿಸುವ ಮತ್ತು ಸಂರಕ್ಷಿಸುವ ಉದ್ದೇಶದಿಂದ ರಾಷ್ಟ್ರೀಯ ಗೋಕುಲ್ ಮಿಷನ್ ನ್ನು ಆರಂಭಿಸಿದೆ.