Job Description: * ಪ್ರಸ್ತುತ 2021 ರ ವನ್ಯಜೀವಿ ವಾರವನ್ನು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು 2021 ರ ಅಕ್ಟೋಬರ್. 2 ರಂದು ಶ್ರೀನಗರದ ಶೇರ್-ಇ-ಕಾಶ್ಮೀರ ಅಂತರಾಷ್ಟ್ರೀಯ ಕನ್ವೆನ್ಶನ್ ಸೆಂಟರ್'ನಲ್ಲಿ ಉದ್ಘಾಟಿಸಿದರು. * ಪ್ರಸ್ತುತ ಇದೇ ಅಕ್ಟೋಬರ್ 2 ರಿಂದ ಅಕ್ಟೋಬರ್ 8 ರವರೆಗೆ ಈ ವನ್ಯಜೀವಿ ವಾರವನ್ನು ಆಚರಿಸಲಾಗುತ್ತದೆ. * ಈ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಸರ್ಕಾರವು ದಚಿಗಮ್ ರಾಷ್ಟ್ರೀಯ ಉದ್ಯಾನವನ್ನು ಸಾರ್ವಜನಿಕರಿಗಾಗಿ ಪ್ರವೇಶವನ್ನು ನೀಡಿತು. * ಈ ಮೊದಲು 1957 ರಲ್ಲಿ ಮೊದಲ ವನ್ಯಜೀವಿ ವಾರವನ್ನು ಆಚರಣೆ ಮಾಡಲಾಯಿತು, ಮತ್ತೇ ಭಾರತೀಯ ವನ್ಯಜೀವಿ ಮಂಡಳಿಯು 1952 ರಲ್ಲಿ ಭಾರತದಾದ್ಯಂತ ವನ್ಯಜೀವಿಗಳನ್ನು ರಕ್ಷಿಸುವ ಬಗೆಗಿನ ವಿಷ್ಯಯದ ಬಗ್ಗೆ ಜಾಗೃತಿ ಮೂಡಿಸಲು ಆರಂಬಿಸಿತು. * 2021 ರ ವನ್ಯಜೀವಿ ವಾರದ ಧ್ಯೆಯೇ ವ್ಯಾಕ: 'ಅರಣ್ಯಗಳು ಮತ್ತು ಜೀವನೋಪಾಯಗಳು ಹಾಗೂ ಜನರು ಮತ್ತು ಗ್ರಹಗಳನ್ನು ಉಳಿಸಿಕೊಳ್ಳುವುದು' ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಗಿದೆ.