Job Description: * ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು 2021ರ ರಾಷ್ಟ್ರೀಯ ಏಕೀಕರಣ ಮತ್ತು ರಾಷ್ಟ್ರೀಯ ಕೊಡುಗೆಯ 'ಲೋಕಪ್ರಿಯ ಗೋಪಿನಾಥ್ ಬೋರ್ಡೊಲಾಯ್ ಪ್ರಶಸ್ತಿ'ಯನ್ನು ಪ್ರಧಾನ ಮಾಡಿದರು. * ಪ್ರಸ್ತುತ ಅಸ್ಸಾಂ ನ ಕಸ್ತೂರ್ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಬರಹಗಾರ ನಿರೋದ್ ಕುಮಾರ್ ಬರುವಾ ಅವರಿಗೆ 'ಶಿಲ್ಲಾಂಗ್ ಚೇಂಬರ್ ಕಾಯಿರ್'ಗೆ ಪ್ರಶಸ್ತಿಗಳನ್ನು ನೀಡಲಾಯಿತು, ಈ ಪ್ರಶಸ್ತಿಯು ಅಸ್ಸಾಂನ ಅತಿದೊಡ್ಡ ನಾಗರಿಕ ಪ್ರಶಸ್ತಿಯಾಗಿದೆ, ರಾಷ್ಟ್ರಗಳ ಏಕೀಕರಣಕ್ಕಾಗಿ ಅವರ ಅನುಕರಣೀಯ ಕೊಡುಗೆಗಳಿಗೆ ಗೌರವ ನೀಡಲು ವಿವಿಧ ಸಂಸ್ಥೆ ಮತ್ತು ವ್ಯಕ್ತಿಗಳಿಗೆ ನೀಡಲಾಗುತ್ತದೆ. * ಈ ಪ್ರಶಸ್ತಿಯು 5 ಲಕ್ಷ ನಗದು ಹಾಗೂ ಪ್ರಮಾಣಪತ್ರವನ್ನು ಹೊಂದಿರುತ್ತದೆ. * ಈ ಪ್ರಶಸ್ತಿಯುನ್ನು ಅಸ್ಸಾಂನ ಮೊದಲ ಮುಖ್ಯಮಂತ್ರಿ ಲೋಕಪ್ರಿಯ ಗೋಪಿನಾಥ್ ಬೋರ್ಡೊಲಾಯ್ ಅವರ ಹೆಸರಿನಲ್ಲಿ ಪ್ರಧಾನ ಮಾಡಲಾಗುತ್ತದೆ, ಹಾಗೂ ಮುಖ್ಯಮಂತ್ರಿ ಲೋಕಪ್ರಿಯ ಅವರಿಗೆ 1999 ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ. * 2001 ರಲ್ಲಿ ಶಿಲ್ಲಾಂಗ್ ಚೇಂಬರ್ ಕಾಯಿರ್'ನ್ನು ಸ್ಥಾಪಿಸಲಾಗಿದೆ, ಇದನ್ನು ಮಾರ್ಗದರ್ಶಕ ಮತ್ತು ಗಾಯಕರಾದ ನೀಲ್ ನಾಂಗ್ಕಿನ್ರಿಹ್ ಅವರು ಸ್ಥಾಪನೆ ಮಾಡಿದ್ದಾರೆ. * ಮಹಾತ್ಮ ಗಾಂಧಿ ಅಸ್ಸಾಂಗೆ ಭೇಟಿ ನೀಡಿದ ಸಂಧರ್ಭದಲ್ಲಿ ಅಂದರೆ 1946 ಜನವರಿ. 9 ರಂದು ಕಸ್ತೂರ್ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ್ನು ಸ್ಥಾಪಿಸಲಾಗಿದೆ, ಇದೀಗ ಈ ಟ್ರಸ್ಟ್ ಗ್ರಾಮೀಣ ಮಹಿಳೆ ಮತ್ತು ಮಕ್ಕಳಿಗಾಗಿ ಕಾರ್ಯ ನಿರ್ವಹಿಸುತ್ತಿದೆ.