Job Description: * ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಅವರು ಇತ್ತೀಚಿಗೆ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರೊಂದಿಗೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಗಳನ್ನು ಚರ್ಚಿಸಿದರು. * ಹರ್ಷವರ್ಧನ್ ಶೃಂಗ್ಲಾ ಅವರು 4 ದಿನಗಳ ಪ್ರವಾಸಕ್ಕಾಗಿ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದ್ದರು ಆ ಸಂಧರ್ಭದಲ್ಲಿ ದ್ವೀಪರಾಷ್ಟ್ರದ ನಾಯಕ ಅಧ್ಯಕ್ಷ ಗೊಟಬಯ ರಾಜಪಕ್ಷೆ ಅವರ ಜೊತೆಗೆ ಉಭಯ ದೇಶಗಳ ನಡುವಿನ ಸ್ನೇಹ ಹಾಗೂ ಸಹಕಾರ ಸಂಬಂಧಗಳ ಬಗ್ಗೆ ಮಾತುಕತೆ ನಡೆಸಿದರು. * ಎರಡು ದೇಶಗಳ ಚರ್ಚೆಯ ಸಂಧರ್ಭದಲ್ಲಿ ಈ ಹಿಂದೆ 1987 ರಲ್ಲಿ ನಡೆದ ಭಾರತ-ಲಂಕಾ ಒಪ್ಪಂದದ ಪ್ರಕಾರ 13 ನೇ ತಿದ್ದುಪಡಿಯು ಅನುಸಾರ ತಮಿಳು ಸಮುದಾಯದವರಿಗೆ ಅಧಿಕಾರ ಹಂಚುವ ವಿಷಯವನ್ನು ಎತ್ತಿ ತೋರಿಸಿದರು ಹಾಗೂ ಇದನ್ನು ಜಾರಿಗೆ ತರಲು ಭಾರತ ಪ್ರಯತ್ನ ಪಡುತ್ತಿದೆ ಎಂದು ತಿಳಿಸಿದರು.