Job Description: * ಪ್ರಸ್ತುತ 2021 ರ ಆಗಸ್ಟ್ ಭೂಮಿಯ ಮೇಲಿನ 6 ನೇ ಅತ್ಯಂತ ಬಿಸಿ ತಿಂಗಳು ಎಂದು NOAA (ನ್ಯಾಷನಲ್ ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಇನ್ಫಾರ್ಮಶನ್ ಅನಾಲಿಸಿಸ್)ಯ ರಾಷ್ಟ್ರೀಯ ಪರಿಸರ ಮಾಹಿತಿ ವಿಶ್ಲೇಷಣೆಯ ತಿಳಿಸಿದೆ. * ಸುಮಾರು 142 ವರ್ಷಗಳಲ್ಲಿ 2021 ರ ಆಗಸ್ಟ್ 6 ನೇ ಬೆಚ್ಚಗಿನ ತಿಂಗಳು ಎಂದಿದ್ದಾರೆ, ವಿಜ್ಞಾನಿಗಳು ಸರಾಸರಿ ಜಾಗತಿಕ ಭೂಮಿ ಹಾಗೂ ಸಾಗರ ಮೇಲ್ಮೈ ತಾಪಮಾನವು 20ನೇ ಶತಮಾನದ ಸರಾಸರಿಗಿಂತ 1.62 ಡಿಗ್ರಿ ಹೆಚ್ಚಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಏಷ್ಯಾ ತನ್ನ 2 ನೇ ಬೆಚ್ಚಗಿನ ಆಗಸ್ಟ್ ತಿಂಗಳನ್ನು ಹೊಂದಿತ್ತು, ಹಾಗೂ ಆಫ್ರಿಕಾ 3 ನೇ ಆಗಸ್ಟ್ ತಿಂಗಳನ್ನು ಹೊಂದಿತ್ತು. * ಪ್ರಸ್ತುತ ಭೂಮಿಯ ಮೇಲಿನ 10 ಬೆಚ್ಚಗಿನ ಆಗಸ್ಟ್ಗಳಲ್ಲಿ 2009 ರಿಂದ 9 ತಿಂಗಳು ಸಂಭವಿಸಿವೆ. * 2020 ನೇ ವರ್ಷವು ಉತ್ತರ ಗೋಳಾರ್ಧದಲ್ಲಿ ಅತ್ಯಂತ ಬೇಸಿಗೆಯನ್ನು ಕಂಡಿದೆ, ಜೂನ್-ಆಗಸ್ಟ್ ನ್ನು ಉತ್ತರ ಗೋಳಾರ್ಧದಲ್ಲಿ ಹವಾಮಾನ ಬೇಸಿಗೆ ಎನ್ನುವರು. * ಭೂಮಿಯ ಮೇಲೆ ದಾಖಲಾದ ಜನವರಿ-ಆಗಸ್ಟ್ 6 ನೇ ಬೆಚ್ಚಗಿನ ಅವಧಿಯಾಗಿದೆ, ಇದನ್ನು 20 ನೇ ಶತಮಾನಕ್ಕೆ ಹೋಲಿಸಿದರೆ ಈ ತಾಪಮಾನವು 1.48 ಡಿಗ್ರಿ ಯಾಗಿದೆ. * ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತ (NOAA) ಇದೊಂದು ಅಮೇರಿಕನ್ ವೈಜ್ಞಾನಿಕ ಮತ್ತು ನಿಯಂತ್ರಕ ಏಜೆನ್ಸಿಯಾಗಿದೆ, ಇದು 'ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಕಾಮರ್ಸ್' ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ಹವಾಮಾನ, ಸಾಗರ ಹಾಗೂ ವಾತಾವರಣದ ಪರಿಸ್ಥಿತಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ.