Job Description: * ಜೂನಿಯರ್ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ ನಲ್ಲಿ ಭಾರತವು ಅಗ್ರಸ್ಥಾನವನ್ನು ಪಡೆದುಕೊಂಡಿದೆ. * ಪ್ರಸ್ತುತ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಈ 10 ಮೀ. ಏರ್ ಪಿಸ್ತೂಲ್ ವಿಭಾಗದ ಮಿಶ್ರ ಸ್ಪರ್ಧೆಯಲ್ಲಿ ಚಿನ್ನವನ್ನು ಜಯಿಸಿದೆ. * ಸದ್ಯ ಭಾರತವು ಒಟ್ಟಾರೆ 6 ಚಿನ್ನ, 6 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನೂ ಜಯಿಸಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. * ಅಮೇರಿಕ ದೇಶವು 4 ಚಿನ್ನ, 4 ಬೆಳ್ಳಿ ಹಾಗೂ 2 ಕಂಚು ಜಯಿಸಿ ದ್ವಿತೀಯ ಸ್ಥಾನ ಪಡೆದಿದೆ. * ಪ್ರಸ್ತುತ ಮನು ಭಾಕರ್ ಅವರು ಭಾರತಕ್ಕೆ ಎರಡು ಚಿನ್ನದ ಪದಕಗಳನ್ನು ಜಯಿಸಿದ್ದಾರೆ. * ಪ್ರಸ್ತುತ ಪುರುಷರ ಏರ್ ಪಿಸ್ತೂಲ್ ತಂಡ ನವೀನ್, ಸರಬ್ಜೋತ್ ಸಿಂಗ್ ಹಾಗೂ ಶಿವ ನರ್ವಾಲ್ ರನ್ನು ಒಳಗೊಂಡು ಚಿನ್ನವನ್ನು ಜಯಿಸಿದೆ. * ಇದೇ 10 ಮೀ. ಏರ್ ರೈಫಲ್ ಮಿಶ್ರ ಸ್ಪರ್ಧೆಯಲ್ಲಿ ಆತ್ಮಿಕಾ ಗುಪ್ತಾ ರಾಜ್ಪ್ರೀತ್ ಸಿಂಗ್ ಜೋಡಿಯು ಬೆಳ್ಳಿ ಪದಕವನ್ನು ಜಯಿಸಿವೆ.