Job Description: * ಕನ್ನಡಿಗ ಎಸ್ವಿ ಸುನೀಲ್ ಅವರು ಈ ಹಿಂದೆ ಕಳೆದ 14 ವರ್ಷಗಳಿಂದ ರಾಷ್ಟ್ರೀಯ ಹಾಕಿ ತಂಡದ ಭಾಗವಾಗಿದ್ದರು, ಇದೀಗ ಇವರು ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಣೆ ಮಾಡಿದ್ದಾರೆ. * ಎಸ್ವಿ ಸುನೀಲ್ ಅವರು 2014 ರ ಏಷ್ಯಾಡ್ ಸ್ವರ್ಣ ಪದಕ ವಿಜೇತ ಭಾರತ ತಂಡದ ಆಟಗಾರರಾಗಿದ್ದರು, ಹಾಗೂ ಇವರು ರಾಷ್ಟ್ರೀಯ ತಂಡದ ಪರವಾಗಿ 264 ಪಂದ್ಯಗಳಲ್ಲಿ ಆಟವಾಡಿ 72 ಗೋಲು ಗಳಿಸಿದ್ದರು. * ಎಸ್ವಿ ಸುನೀಲ್ ಅವರು 2007 ರಲ್ಲಿ ಏಷ್ಯಾಕಪ್ನಲ್ಲಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು, ಮತ್ತೇ 2012 ರ ಲಂಡನ್ ಹಾಗೂ 2016 ರ ರಿಯೋ ಒಲಿಂಪಿಕ್ಸ್ನಲ್ಲಿ ತಂಡದಲ್ಲಿ ಆಟವಾಡಿದ್ದರು. * ಎಸ್ವಿ. ಸುನೀಲ್ ಅವರು 2011 ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ, 2012 ರ ಟೂರ್ನಿಯಲ್ಲಿ ಬೆಳ್ಳಿ ಪದಕವನ್ನು ಜಯಿಸಿರುವ ತಂಡದ ಸದಸ್ಯರಾಗಿದ್ದರು, ಮತ್ತೇ 2014 ರ ಏಷ್ಯಾಡ್ನಲ್ಲಿ ಸ್ವರ್ಣ, 2018ರ ಏಷ್ಯಾಡ್ನಲ್ಲಿ ಕಂಚು ಮತ್ತೇ 2017 ರ ಏಷ್ಯಾಕಪ್ನಲ್ಲಿ ಚಿನ್ನ ಜಯಿಸಿರುವ ತಂಡದ ಸದಸ್ಯರಾಗಿದ್ದರು, * ಭಾರತ ತಂಡವು 2016 ರ ಹಾಗೂ 2018 ರ ಎಫ್ ಐಎಚ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಪದಕವನ್ನು ಜಯಿಸಿತ್ತು, 2014 ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಜಯಿಸಿರುವ ತಂಡದ ಸದಸ್ಯ ಆಟಗಾರರಾಗಿದ್ದರು.