Job Description: * ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ ಮಿಷನ್- ಅರ್ಬನ್ ಹಾಗೂ ಅಮೃತ್ ಕಾರ್ಯಕ್ರಮದ 2ನೇ ಹಂತದ ಯೋಜನೆಗಳಿಗೆ ಚಾಲನೆ ನೀಡಿದರು. * ಪ್ರಸ್ತುತ ಸ್ವಚ್ಛ ಭಾರತ್ ಮಿಷನ್ 2 ನೇ ಹಂತದ ಯೋಜನೆಗಳಲ್ಲಿ ನಗರ ಪ್ರದೇಶಗಳನ್ನು ತ್ಯಾಜ್ಯ ಮುಕ್ತವಾಗಿಸುವುದು, ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುವದು ಎಂದು ತಿಳಿಸಿದ್ದಾರೆ. * ಸುಮಾರು 4,700 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, 2.68 ಕೋಟಿ ರೂ. ವೆಚ್ಚದಲ್ಲಿ ನಗರ ಪ್ರದೇಶಗಳಿಗೆ ಸಮರ್ಪಕ ಕುಡಿಯುವನೀರು ಸೌಲಭ್ಯ ಒದಗಿಸುವದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. * ಪ್ರಸ್ತುತ 1.41 ಲಕ್ಷ ಕೋಟಿ ಹಣವನ್ನು ಈ ಸ್ವಚ್ಛಭಾರತ್ ಮಿಷನ್ನ 2 ನೇ ಹಂತದ ಯೋಜನೆಗೆ ನಿಗದಿಪಡಿಸಿದೆ, ಹಾಗೂ ಅಮೃತ್ 2.0 ಯೋಜನೆಗಾಗಿ 2.87 ಲಕ್ಷ ಕೋಟಿ ರೂ. ಹಣ ನಿಗದಿಪಡಿಸಲಾಗಿದೆ. * ಸ್ವಚ್ಛ ಭಾರತ್ ಮಿಷನ್ 2.0 ಯೋಜನೆ ಅಡಿಯಲ್ಲಿ ಎಲ್ಲ ನಗರಗಳನ್ನು ತ್ಯಾಜ್ಯ ಮುಕ್ತಗೊಳಿಸುವಿಕೆ, ಬಯಲು ಶೌಚಮುಕ್ತಗೊಳಿಸುವಿಕೆ, ಹಾಗೂ ನಗರ ಪ್ರದೇಶಗಳಲ್ಲಿ ನೈರ್ಮಲ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವದು, ಅಷ್ಟೇ ಅಲ್ಲದೇ ಘನ್ಯ ತ್ಯಾಜ್ಯವನ್ನು ವಿಂಗಡಿಸಿ 3R'ನ ಅಡಿಯಲ್ಲಿ (ರೆಡ್ಯೂಸ್, ರೀ ಯೂಸ್ ಮತ್ತು ರೀ ಸೈಕಲ್) ನಿರ್ವಹಣೆ ಮಾಡುವ ಗುರಿ ಹೊಂದಿದೆ.