Job Description: * ಪ್ರಸ್ತುತ ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತದ ಶೂಟರ್ಗಳು ಒಂದೇ ದಿನದಲ್ಲಿ ಒಂದು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನೂ ಜಯಿಸಿದ್ದಾರೆ. * ಮನು ಭಾಕರ್ಗೆ ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್ಷಿಪ್'ನ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ, ಹಾಗೂ ಇದೇ ವಿಭಾಗದಲ್ಲಿ ಪಾಲ್ಗೊಂಡಿರುವ ಇಶಾ ಸಿಂಗ್ ಬೆಳ್ಳಿ ಪದಕವನ್ನು ಜಯಿಸಿದ್ದಾರೆ, ಟರ್ಕಿಯ ಯೆಸ್ಮಿನ್ ಬೇಜಾ ಯಿಲ್ಮಾಜ್ ಕಂಚು ತಮ್ಮದಾಗಿಸಿಕೊಂಡಿದ್ದಾರೆ. * ರುದ್ರಾಕ್ಷ್ ಬಾಳಾಸಾಹೇಬ್ ಪಾಟೀಲ್ ಅವರು ಪುರುಷರ 10 ಮೀ. ಏರ್ ರೈಫಲ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ, ಹಾಗೂ ಮಹಿಳೆಯರ ವಿಭಾಗದಲ್ಲಿ ರಮಿತಾ ಅವರು ಕಂಚಿನ ಪದಕವನ್ನು ಜಯಿಸಿದ್ದಾರೆ.