Job Description: * ಪ್ರಸ್ತುತ ವಿಶ್ವ ಆರ್ಚರಿ ಚಾಂಪಿಯನ್ಷಿಪ್ನಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಮ್ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಜ್ಯೋತಿ ಸುರೇಖಾ ವೆನ್ನಮ್ ಅವರು ಮಹಿಳೆಯರ ವೈಯಕ್ತಿಕ ಕಂಪೌಂಡ್ ವಿಭಾಗದ ಫೈನಲ್ ಕೊಲಂಬಿಯಾದ ಸಾರಾ ಲೋಪೆಜ್ ಎದುರು ಸೋಲ ಅನಿಭವಿಸಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. * 3 ಬಾರಿಯ ವಿಶ್ವಕಪ್ ವಿಜೇತರಾದ ಅಭಿಷೇಕ್ ವರ್ಮಾ ಅವರು ಪುರುಷರ ವೈಯಕ್ತಿಕ ಕಂಪೌಂಡ್ ವಿಭಾಗದಲ್ಲಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸೋಲ ಅನುಭವಿಸಿ ಹೊರ ನಡೆದಿದ್ದಾರೆ. * ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ನೆದರ್ಲೆಂಡ್ಸ್ನ ಮೈಕ್ ಶೋಲೆಸರ್ ಎದುರು ಅಭಿಷೇಕ್ ವರ್ಮಾ ಅವರು ಅವರು ಕೇವಲ ಒಂದು ಪಾಯಿಂಟ್ನಿಂದ 147-148 ಸೋಲ ಅನುಭವಿಸಿದ್ದಾರೆ. * ಪ್ರಸ್ತುತ ಭಾರತೀಯ ಆರ್ಚರಿ ಪಟುಗಳು ಚಾಂಪಿಯನ್ಷಿಪ್ನ ಕಂಪೌಂಡ್ ವಿಭಾಗದಲ್ಲಿ ಒಟ್ಟಾರೆ 3 ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ. * ಈ ಹಿಂದೆ 2019 ರಲ್ಲಿ ನೆದರ್ಲೆಂಡ್ಸ್ನ ಡೆನ್ ಬಾಶ್ನಲ್ಲಿ ನಡೆದಿರುವ ವಿಶ್ವ ಚಾಂಪಿಯನ್ಷಿಪ್ನಲ್ಲಿ ಜ್ಯೋತಿ ಸುರೇಖಾ ವೆನ್ನಮ್ ಅವರು ಕಂಚಿನ ಪದಕವನ್ನು ಜಯಿಸಿದ್ದರು.